ಆತಂಕದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಮಕ್ಕಳು
ಸುಳ್ಯದ ಶಾಂತಿನಗರ ಬೆಟ್ಟಂಪಾಡಿಯ ಅಂಗನವಾಡಿ ಕಟ್ಟಡ ಬಳಿ ಸಾರ್ವಜನಿಕ ಶೌಚಾಲಯ ಕಟ್ಟಡವಿದ್ದು, ಆ ಕಟ್ಟಡದ ಮುಂಭಾಗ ಭೂಮಿಯು ಉದ್ದಕ್ಕೆ ಬಿರುಕು ಬಿಟ್ಟು ಹೊಂಡ ನಿರ್ಮಾಣವಾಗಿದೆ.
















ಇಂದು ಬೆಳಿಗ್ಗೆ ಅಂಗನವಾಡಿ ತೆರೆಯಲು ಬಂದ ಸಹಾಯಕಿಯವರಿಗೆ ಈ ದೃಶ್ಯ ಕಂಡು ಬಂದಿದ್ದು ಕೂಡಲೇ ಸಂಬಂಧಪಟ್ಟ ಇಲಾಖೆಯವರಿಗೆ ಮಾಹಿತಿ ತಿಳಿಸಿದ್ದಾರೆ.
ಇದೀಗ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಅಚಾನಕ್ಕಾಗಿ ಇಷ್ಟೊಂದು ಬೃಹತ್ ಆಕಾರದಲ್ಲಿ ಭೂಮಿ ಬಿರುಕುಗೊಂಡ ದೃಶ್ಯವನ್ನು ಕಂಡ ಅಂಗನವಾಡಿಯ ಶಿಕ್ಷಕರು ಹಾಗೂ ಪುಟಾಣಿ ಮಕ್ಕಳು ಆತಂಕಗೊಂಡಿದ್ದಾರೆ.










