ಜಯನಗರ : ರಸ್ತೆ ಗುಂಡಿಗೆ ಬೇಸತ್ತು ಸ್ಥಳಿಯರಿಂದಲೇ ಶ್ರಮದಾನದ ಮೂಲಕ ತಾತ್ಕಾಲಿಕ ದುರಸ್ತಿ

0

ಜಯನಗರ : ರಸ್ತೆ ಗುಂಡಿಗೆ ಬೇಸತ್ತು ಸ್ಥಳಿಯರಿಂದಲೇ ಶ್ರಮದಾನದ ಮೂಲಕ ತಾತ್ಕಾಲಿಕ ದುರಸ್ತಿರಸ್ತೆಯಲ್ಲಿದ್ದ ಗುಂಡಿಗೆ ಬೇಸತ್ತು ಸ್ಥಳಿಯರೇ ಶ್ರಮದಾನದ ಮೂಲಕ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಪಡಿಸಿದರು.

ಜಯನಗರ ರಸ್ತೆಯ ಹೊಸಗದ್ದೆ ತಿರುವು ಬಳಿಯಿಂದ ಜಯನಗರ ಶಾಲೆಯವರೆಗೆ ತೀರಾ ಹದಗೆಟ್ಟು ಹೋಗಿದ್ದು, ಈ ರಸ್ತೆಯ ದುರಸ್ತಿಯ ಬಗ್ಗೆ ಸ್ಥಳಿಯ ನಿವಾಸಿಗಳು ಕಳೆದ ಕೆಲವು ದಿನಗಳ ಹಿಂದೆ ಬೃಹತ್ ಹೋರಾಟವನ್ನು ಮಾಡಿದ್ದರು. ಆದರೆ ಪ್ರತಿಭಟನೆ ಕಳೆದು ತಿಂಗಳೇ ಕಳೆದಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿಲ್ಲ ಎಂದು ಬೇಸತ್ತು ಸ್ಥಳಿಯ ಅಟೋ ಚಾಲಕರು ಇಂದು ರಸ್ತೆಗಿಳಿದು ತಾತ್ಕಾಲಿಕ ದುರಸ್ತಿ ಕಾರ್ಯದಲ್ಲಿ ತೊಡಗಿಕೊಂಡರು.


ತಮಿಳು ಕ್ವಾಟ್ರಸ್ ಬಳಿ ರಸ್ತೆಯಲ್ಲಿ ಹೊಂಡಗುಂಡಿಗಳು ಇದ್ದು ಅದನ್ನು ಮಣ್ಣು ಹಾಕುವ ಮೂಲಕ ಮತ್ತು ಮಳೆ ನೀರಿಗೆ ಮೇಲ್ಭಾಗದಿಂದ ಬಂದ ಮಣ್ಣು ರಸ್ತೆಯಲ್ಲಿ ಶೇಖರಣೆಗೊಂಡು ದೊಡ್ಡ ದೊಡ್ಡ ದಿಬ್ಬಗಳಾಗಿತ್ತು. ಇದರಿಂದಾಗಿ ವಾಹನ ಸವಾರಿಗೆ ಸಂಚಾರಕ್ಕೆ ತೊಡಕುಂಟಾಗಿತ್ತು. ಇದನ್ನು ಗಮನಿಸಿದ ಸ್ಥಳಿಯರು ಮಣ್ಣನ್ನು ತೆರವುಗೊಳಿಸಿ ರಸ್ತೆಯಲ್ಲಿದ್ದ ಹೊಂಡಗಳಿಗೆ ಮಣ್ಣನ್ನು ತುಂಬಿಸಿ ತಾತ್ಕಾಲಿಕ ದುರಸ್ತಿ ಮಾಡಿದರು.


ಈ ಸಂದರ್ಭದಲ್ಲಿ ಅಟೋ ಚಾಲಕ ಗೋಪಾಲ ಜಯನಗರ, ಹರೀಶ್ ಹಳೆಗೇಟು, ಮನು ಜಯನಗರ, ಜವಾದ್ ಜಯನಗರ, ಸುರೇಶ್ ಮಡಿಕೇರಿ, ಕರುಣೇಶ್ ಜಯನಗರ ಇದ್ದರು.