ಆ.3ರಂದು ಧನಲಕ್ಷ್ಮಿ ಮಹಿಳಾ ಮಂಡಲಅಜ್ಜಾವರ ಇದರ ವತಿಯಿಂದ ಶಂಕರ ಭಾರತಿ ವೇದ ಪಾಠಶಾಲೆ ಬಯಂಬು ಅಜ್ಜಾವರದಲ್ಲಿ ಆಟಿ 18ರ ಆಚರಣೆ ಕಾರ್ಯಕ್ರಮ ನಡೆಸಲಾಯಿತು. ಉದ್ಘಾಟನೆಯನ್ನು ಜಯಂತಿ ಜನಾರ್ಧನರವರು ನೆರವೇರಿಸಿ ಆಟಿ 18ರ ಆಚರಣೆ ಮಹತ್ವ, ಹಿಂದಿನ ಕಾಲದ ಹಾಗೂ ಈಗಿನ ಕಾಲದ ಆಟಿ ಆಚರಣೆಗೆ ಇರುವ ವ್ಯತ್ಯಾಸವನ್ನು ತಿಳಿಸಿದರು.
















ವೇದಿಕೆಯಲ್ಲಿ ಧನಲಕ್ಷ್ಮಿ ಮಹಿಳಾ ಮಂಡಲದ ಅಧ್ಯಕ್ಷರಾದ ಕವಿತ ಪುರುಷೋತ್ತಮ, ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷರಾದ ವೇದಾವತಿ ಬಾಲಚಂದ್ರ, ಮಹಿಳಾ ಮಂಡಲದ ಗೌರವಾಧ್ಯಕ್ಷರಾದ ನಳಿನಾಕ್ಷಿ ಪ್ರಸಾದ್ ಹಾಗೂ 28 ಬಗೆಯ ಆಟಿಯ ತಿನಿಸು ಗಳಿದ್ದವು.
ಆಟಿ ಆಚರಣೆ ಬಗ್ಗೆ ಲಕ್ಕಿಡಿಪ್ ಡ್ರಾ ಮಾಡಲಾಯಿತು. ಪ್ರಥಮ ಶಶ್ಮಿ ಭಟ್, ದ್ವಿತೀಯ ಕಿರಣ್ ರಾಜ್ ಭಟ್, ತೃತಿಯ ಭವಿತ್ ಕೆ ಇವರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮವನ್ನು ಮನೋರಮ ಇವರ ಪ್ರಾರ್ಥನೆಯೊಂದಿಗೆ ನೆರವೇರಿಸಿ ಸ್ವಾಗತವನ್ನು ವಾಣಿ ಶಿವರಾಮ ದೊಡ್ಡೇರಿ ಹಾಗೂ ಧನ್ಯವಾದ ವಿಮಲಾ ಅರುಣಾ ಪಡ್ಡಂಬೈಲು ಹಾಗೂ ನಿರೂಪಣೆಯನ್ನು ಸರಸ್ವತಿ ಚಂದ್ರಶೇಖರ್ ನೆರವೇರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿರುವ ಎಲ್ಲರಿಗೂ ಆಟೋಟ ಸ್ಪರ್ಧೆ ನೆರವೇರಿಸಿ ಬಹುಮಾನ ವಿತರಣೆ ಮಾಡಲಾಯಿತು.










