ಜಟ್ಟಿಪಳ್ಳ :ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕಪಿಲ ಯುವಕ ಮಂಡಲ ಜಟ್ಟಿಪಳ್ಳ ಮತ್ತು ಮಾನಸ ಮಹಿಳಾ ಮಂಡಲ ಜಟ್ಟಿಪಳ್ಳ ಇದರ ಜಂಟಿ ಆಶ್ರಯದಲ್ಲಿ ನಡೆಯುವ ೩೭ನೇ ವರುಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಶ್ರೀ ಚೆನ್ನಕೇಶವ ದೇವರ ವಸಂತ ಕಟ್ಟೆ ಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಶ್ರೀ ರಾಮ ಭಜನಾ ಸೇವಾ ಸಂಘದ ಅಧ್ಯಕ್ಷರಾದ ಹರೀಶ್ಚಂದ್ರ ಎಂ. ಆರ್. ಉಪಾಧ್ಯಕ್ಷರಾದ ರಮಾನಂದ ರೈ ಕಾರ್ಯದರ್ಶಿ ರಘುನಾಥ್, ಕಪಿಲ ಯುವಕ ಮಂಡಲದ ಗೌರವಾದ್ಯಕ್ಷರಾದ ಸಂತೋಷ್ ಕುಮಾರ್, ಕಪಿಲ ಯುವಕ ಮಂಡಲ ಇದರ ಅಧ್ಯಕ್ಷರಾದ ಭಾನು ಪ್ರಕಾಶ್, ಯುವಕ ಮಂಡಲದ ಉಪಾಧ್ಯಕ್ಷರಾದ ವಿಪಿನ್ ಕರ್ಕೇರ, ಯುವಕ ಮಂಡಲ ಮಾಜಿ ಅಧ್ಯಕ್ಷರಾದ ಚೇತನ್ ಜಟ್ಟಿಪಳ್ಳ, ಕಾರ್ಯದರ್ಶಿ ಕೌಶಿಕ್ ಕಾನತ್ತಿಲ, ಖಜಾಂಚಿ ಚಂದ್ರಹಾಸ್ ಎನ್.ಎಸ್., ನ್ಯಾಯವಾದಿ ನಾರಾಯಣ ಜಟ್ಟಿಪಳ್ಳ,
ಕೃಷ್ಣ ಜಟ್ಟಿಪಳ್ಳ ಉಪಸ್ಥಿತರಿದ್ದರು.