
ಮುಕ್ಕೂರು : ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ 16 ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯು ಆ.27 ರಂದು ಮುಕ್ಕೂರು ಶಾಲಾ ವಠಾರದಲ್ಲಿ ನಡೆಯಲಿದೆ.
1 ರಿಂದ 3 ನೇ ತರಗತಿ, 4 ರಿಂದ 7 ತರಗತಿ ಹಾಗೂ 8 ರಿಂದ 10 ನೇ ತರಗತಿ ಹೀಗೆ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಸ್ಪರ್ಧೆ ಆರಂಭಗೊಂಡು 11 ಗಂಟೆ ಒಳಗೆ ಮುಕ್ತಾಯಗೊಳ್ಳಲಿದೆ.















1 ನೇ ತರಗತಿಯಿಂದ 3 ನೇ ತರಗತಿ ವಿಭಾಗಕ್ಕೆ ಐಚ್ಛಿಕ, 4 ರಿಂದ 7 ನೇ ತರಗತಿ ವಿಭಾಗಕ್ಕೆ- ಐಚ್ಛಿಕ, 8 ರಿಂದ 10 ನೇ ತರಗತಿ ವಿಭಾಗದವರಿಗೆ ಚಿತ್ರ ಬಿಡಿಸಬೇಕಾದ ವಿಷಯವನ್ನು ಸ್ಥಳದಲ್ಲೇ ತಿಳಿಸಲಾಗುವುದು. ಸ್ಪರ್ಧಿಗೆ ಡ್ರಾಯಿಂಗ್ ಶೀಟ್ ಅನ್ನು ಸ್ಥಳದಲ್ಲಿ ನೀಡಲಾಗುವುದು. ಚಿತ್ರ ಬಿಡಿಸಲು ಬೇಕಾದ ಉಳಿದ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಬಹುಮಾನ ನೀಡಲಾಗುತ್ತದೆ. ಯಾವುದೇ ತಾಲೂಕಿನ ವಿದ್ಯಾರ್ಥಿಗಳು ಕೂಡ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಮುಕ್ಕೂರು ಸ್ಪರ್ಧೆ ನಡೆಯುವ ಸ್ಥಳವಾಗಿದ್ದು ಆಸಕ್ತರು ಹೆಚ್ಚಿನ ಮಾಹಿತಿಗಾಗಿ 7022591009 8861739358 9741160813 8618458207 ಸಂಪರ್ಕಿಸಬಹುದು









