ಕುಮಾರಧಾರ ನದಿ ನೀರು ಅಶುದ್ದತೆ, ಹೊಟೇಲ್, ವಸತಿ ಗೃಹಗಳ ತ್ಯಾಜ್ಯ ನೀರಿಗೆ
ತುರ್ತು ಚಿಕಿತ್ಸಾ ಘಟಕ ಸ್ಥಳಾಂತರ, ಸರ್ಕಾರಿ ಜಾಗದ ಅತಿಕ್ರಮಣ, ವಲಸೆ ಕಾರ್ಮಿಕರ ಬಗ್ಗೆ ಚರ್ಚೆ

ಸುಬ್ರಹ್ಮಣ್ಯ ಗ್ರಾ.ಪಂ. ನ ಗ್ರಾಮ ಸಭೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವಲ್ಲೀಶ ಸಭಾಭವನದಲ್ಲಿ ಆ.4 ರಂದು ನಡೆಯಿತು.
















ಗ್ರಾ.ಪಂ ಅಧ್ಯಕ್ಷೆ ಸುಜಾತ ಕಲ್ಲಾಜೆ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಉಪಾಧ್ಯಕ್ಷ ರಾಜೇಶ್ ಎನ್ .ಎಸ್, ಗ್ರಾ.ಪಂ ಸದಸ್ಯರುಗಳಾದ ರಾಜೇಶ್. ಕೆ, ಶ್ರೀಮತಿ ಮಲ್ಲಿಕಾ, ಶ್ರೀಮತಿ ಭಾರತಿ ದಿನೇಶ್, ನಾರಾಯಣ ಅಗ್ರಹಾರ, ಶ್ರೀಮತಿ ದಿವ್ಯ, ಶ್ರೀಮತಿ ಸವಿತಾ. ಕೆ, ಹರೀಶ್ ಇಂಜಾಡಿ, ಶ್ರೀಮತಿ ಸೌಮ್ಯ, ಶ್ರೀಮತಿ ಜಯಂತಿ, ಮೋಹನ .ಕೆ, ಶ್ರೀಮತಿ ಶಶಿಕಲಾ, ದಿಲೀಪ್ ಉಪ್ಪಳಿಕೆ, ಶ್ರೀಮತಿ ಭವ್ಯಕುಮಾರಿ, ಶ್ರೀಮತಿ ಪುಷ್ಪಲತಾ, ಗಿರೀಶ್ ಆಚಾರ್ಯ, ಶ್ರೀಮತಿ ಲಲಿತಾ.ಜಿ, ಮೋಹಿನಿ ಎ.ಎಸ್, ಪಿಡಿಒ ಮಹೇಶ್, ಕಾರ್ಯದರ್ಶಿ ಮೋನಪ್ಪ ಮತ್ತಿತರರು ಉಪಸ್ಥಿತರಿದ್ದರು. ನೊಡೇಲ್ ಅಧಿಕಾರಿಯಾಗಿ ಸಿ.ಡಿ.ಪಿ.ಒ ಶ್ರೀಮತಿ ಶೈಲಜಾ ಉಪಸ್ಥಿತರಿದ್ದರು.

ಗ್ರಾಮ ಸಭೆಯಲ್ಲಿ ಕುಮಾರಧಾರ ನದಿ ನೀರು ಆಶುದ್ದತೆ, ಹೊಟೇಲ್, ವಸತಿ ಗೃಹಗಳು ತ್ಯಾಜ್ಯ ನಿರ್ವಹಣೆ ಮಾಡುವುದು, ತುರ್ತು ಚಿಕಿತ್ಸಾ ಘಟಕ ಸ್ಥಳಾಂತರ, ಸರ್ಕಾರಿ ಜಾಗದ ಅತಿಕ್ರಮಣ, ವಲಸೆ ಕಾರ್ಮಿಕರ ಬಗ್ಗೆ ಚರ್ಚೆ ನಡೆಯಿತು. ಸಭೆಯ ಆರಂಭದಲ್ಲಿ ಸಂಜೀವಿನಿ ಘಟಕದ ವತಿಯಿಂದ ಉತ್ಪಾದಿಸಲ್ಪಟ್ಟ ಸಾಮಾಗ್ರಿಗಳ ಮಾರಟವನ್ನು ಗ್ರಾ.ಪಂ ಅಧ್ಯಕ್ಷರಿಂದ ಉದ್ಘಾಟಿಸಲಾಯಿತು.










