
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಕಾಲೇಜಿನ ಸುಶ್ರುತ ಸಭಾಂಗಣದಲ್ಲಿ ರೋಗನಿದಾನ ಮತ್ತು ವಿಕೃತಿ ವಿಜ್ಞಾನ ವಿಭಾಗದ ನೇತೃತ್ವದಲ್ಲಿ “ರೋಗನಿದಾನ ಜಿಜ್ಞಾಸ” ಕಾರ್ಯಕ್ರಮವನ್ನು ಆ. 4 ರಂದು ನಡೆಸಲಾಯಿತು.















ಕಾರ್ಯಕ್ರಮದಲ್ಲಿ ದ್ವಿತೀಯ ಬಿ ಎ ಎಂ ಎಸ್ ವಿಧ್ಯಾರ್ಥಿಗಳಿಗೆ ವಿವಿಧ ಶಾರೀರಿಕ ಸಂಸ್ಥಾನಗಳ ಪರೀಕ್ಷಾ ವಿಧಿಗಳನ್ನು ಪಾತ್ರಾಭಿನಯ ಪ್ರದರ್ಶನದ ಮೂಲಕ ಹಾಗೂ ಮಾದರಿ ಪ್ರದರ್ಶನ ಸ್ಪರ್ಧೆಯನ್ನು ನಡೆಸಲಾಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಕಾಲೇಜಿನ ಪ್ರಸೂತಿ ತಂತ್ರ ಹಾಗೂ ಸ್ತ್ರೀ ರೋಗ ವಿಭಾಗದ ಮುಖ್ಯಸ್ಥ ಡಾ ಅಶೋಕ್ ಕೆ ಇವರು ಉದ್ಘಾಟಿಸಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಯಾದ ಡಾ.ವಿನಯ್ ಶಂಕರ್ ಭಾರಧ್ವಾಜ್ ಬಿ, ಅಕಾಡೆಮಿಕ್ ಕೋ-ಆರ್ಡಿನೇಟರ್ ಡಾ. ಕವಿತಾ ಬಿ. ಎಂ., ಮೆಡಿಕಲ್ ಆಫಿಸರ್ ಡಾ. ಸನತ್ ಕುಮಾರ್ ಡಿ. ಜಿ., ರೋಗನಿಧಾನ ವಿಭಾಗ ಮುಖ್ಯಸ್ಥೆ ಡಾ. ಭಾರತಿ ಎ. ಪಿ., ಇವರು ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ಕಾಲೇಜಿನ ಭೋದಕ ಭೋದಕೇತರ ಸಿಬ್ಬಂದಿ ವರ್ಗದವರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಕಲಿಕಾ ವೈದ್ಯರುಗಳು, ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕು ಆಸಿಯಾ ಸ್ವಾಗತಿಸಿ, ಕು ಸಿಂಚನ ಹಾಗೂ ಬಳಗ ಪ್ರಾರ್ಥಿಸಿ, ಕು ಸುಜ್ಯಶ್ರೀ ಹಾಗೂ ಕು ತೇಜಸ್ವಿನಿ ನಿರೂಪಿಸಿ, ಕು ಮಹಾಲಕ್ಷ್ಮಿ ವಂದಿಸಿದರು.










