ಎಡಮಂಗಲ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಭೆ, ನೂತನ ಪದಾಧಿಕಾರಿಗಳ ಆಯ್ಕೆ

0

ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಭೆ ಆ. 3ರಂದು ರಾಮಚಂದ್ರ ಕುರಿಯರ ನೇತೃತ್ವದಲ್ಲಿ ಎಡಮಂಗಲದ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಸಂಘಟನಾ ಸಂಚಾಲಕರಾದ
ಕಮಲಾಕ್ಷ ಎಡಮಂಗಲ ವಹಿಸಿದ್ದರು. ಜಿಲ್ಲಾ ಸಂಚಾಲಕರಾದ ಕೃಷ್ಣಪ್ಪ ಸುಣ್ಣಾಜೆ ಪ್ರೊ. ಬಿ. ಕೃಷ್ಣಪ್ಪರ ಭಾವ ಚಿತ್ರಕ್ಕೆ ಹಾರ ಹಾಕಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಳ್ಯ ತಾಲೂಕು ಸಂಚಾಲಕರಾದ ರಾಮಚಂದ್ರ ಕುರಿಯ ಅತಿಥಿಯಾಗಿ ಭಾಗವಹಿಸಿದ್ದರು. ಕೃಷ್ಣಪ್ಪ ಸುಣ್ಣಾಜೆಯವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಪ್ರೊ.‌ ಬಿ ಕೃಷ್ಣಪ್ಪರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಂಘಟನೆಯನ್ನು ಬಲಪಡಿಸಬೇಕು. ಸಂಘಟನೆಯ ಕೆಲವು ಸ್ವಾರ್ಥ ನಾಯಕರುಗಳು ನಮ್ಮನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ನಾವು ಎಚ್ಚರವಾಗಿ ಇರಬೇಕು. ನಾವು ಇವತ್ತು ಅಂಬೇಡ್ಕರ್ ರವರ ಸಂವಿಧಾನದಿಂದ ಶಕ್ತಿವಂತರಾಗಿದ್ದೇವೆ ಎಂದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸುಳ್ಯ ಸಮಿತಿ ಸಂಘಟನಾ ಸಂಚಾಲಕರುಗಳಾದ ಮಹೇಶ್ ಗೌಡ ಪೂದೆ, ಚೋಮ ನಾಯ್ಕ, ಕಡಬ ಸಮಿತಿ ಸಂಚಾಲಕರಾದ ಸಂತೋಷ ಕುಮಾರ್, ಎಡಮಂಗಲ ಗ್ರಾಮ ಸಮಿತಿ ಸಂಚಾಲಕ ಬಾಬು, ಎಣ್ಮೂರು ಸಂಚಾಲಕ ಚಂದ್ರಶೇಖರ, ಸುಳ್ಯ ಸಮಿತಿ ಸಂಚಾಲಕರಾದ ಕರುಣಾಕರ, ಪ್ರಶಾಂತ, ವಸಂತ ನೆಡ್ಪಲ್ಲಿ ಹಾಗೂ ಕಡಬದ ಹರಿಶ, ಪಕೀರ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಡಮಂಗಲ ಗ್ರಾಮ ಸಮಿತಿಯನ್ನು ರಚಿಸಲಾಗಿದ್ದು, ಸಂಚಾಲಕರಾಗಿ ಬಾಬು, ಸಂಘಟನಾ ಸಂಚಾಲಕರುಗಳಾಗಿ ಪ್ರಶಾಂತ, ಹರೀಶ, ಪಕೀರ ಮತ್ತು ಖಜಾಂಜಿಯಾಗಿ ಸಂತೋಷರನ್ನು ಆಯ್ಕೆ ಮಾಡಲಾಯಿತು.