ಅಪಾಯಕಾರಿ ವಿದ್ಯುತ್ ಲೈನ್ ಹಾಗೂ ಮಳೆಗೆ ಕುಸಿಯ ತೊಡಗಿರುವ ತಡೆಗೋಡೆಯ ವೀಕ್ಷಣೆ
ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚನೆ
ಸುಳ್ಯ ಜೂನಿಯರ್ ಕಾಲೇಜಿಗೆ ಸುಳ್ಯ ತಹಶೀಲ್ದಾರರಾದ ಮಂಜುಳಾರವರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಅ 4 ರಂದು ಭೇಟಿ ನೀಡಿ ಶಾಲಾ ಪರಿಸರದ ಸಮಸ್ಯೆ ಗಳನ್ನು ವೀಕ್ಷಣೆ ಮಾಡಿದರು.
ಶಾಲಾ ಆವರಣದ ಮೂಲಕ ಹಾದು ಹೋಗುವ ಅಪಾಯಕಾರಿಯಾದ ವಿದ್ಯುತ್ ಲೈನ್ ಗಳನ್ನು ಮತ್ತು ಕಾಲೇಜು ವರಾಂಡದಲ್ಲಿರುವ ಅಪಾಯಕಾರಿ ಗೋಡೆ ಯನ್ನು ವೀಕ್ಷಿಸಿದ ಅವರು ಸ್ಥಳದಿಂದಲೇ ಮೆಸ್ಕಾಂ ಅಧಿಕಾರಿ ಹರೀಶ್ ನಾಯ್ಕರವರಿಗೆ ಫೋನ್ ಮಾಡಿ ಕೂಡಲೇ ಕ್ರಮ ಕೈ ಗೊಂಡು ಅಪಾಯಕಾರಿ ವಿದ್ಯುತ್ ತಂತಿಗಳನ್ನು ತೆರೆವುಗೊಳಿಸಿಕೊಡುವಂತೆ ಸೂಚನೆಯನ್ನು ನೀಡಿದರು.
ಅದೇ ರೀತಿ ಕಾಲೇಜ್ ಆವರಣದ ಜಾಗದಲ್ಲಿ ತಡೆಗೋಡೆ ನಿರ್ಮಿಸಲು ಬೇಕಾದ ಯೋಜನೆಯನ್ನು ಸಿದ್ಧಪಡಿಸುವ ಬಗ್ಗೆ ಕೆ ಅರ್ ಡಿ ಎಲ್ ನ ಎ ಇ ಇ ಇಶಾಕ್ ರವರಿಗೆ ಸೂಚನೆಯನ್ನು ನೀಡಿದರು.















ಬಳಿಕ ಅವರು ಶಾಲಾ ಅಮೃತ ಮಹೋತ್ಸವದ ಪ್ರಯಕ್ತ ನಡೆಯಲಿರುವ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಕೃಷ್ಣಪ್ಪ,ಸುಳ್ಯ ತಾಲೂಕು ಕಂದಾಯ ನಿರೀಕ್ಷಕರಾದ ಅವಿನ್ ರಂಗತ್ತಮಲೆ,ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿಗಳಾದ ಬಸವರಾಜ್,ಶಿಕ್ಷಣ ಸಂಯೋಜಕರಾದ ಸಂದ್ಯಾಕುಮಾರಿ, ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶ್, ಪ್ರಭಾರ ಪ್ರಾಂಶುಪಾಲರಾದ ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯ ರವರು ಅಧಿಕಾರಿಗಳಿಗೆ ಶಾಲಾ ಪರಿಸರದ ವಿವಿಧ ಸಮಸ್ಯೆಗಳನ್ನು ಮತ್ತು ಅಮೃತ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಬಗ್ಗೆ ಮಾಹಿತಿಯನ್ನು ನೀಡಿದರು. ದೈಹಿಕ ಶಿಕ್ಷಕರಾದ ಯೂಸುಫ್ ಮಾಸ್ಟರ್ ಹಳೆಗೇಟು ಜೊತೆಗಿದ್ದರು.










