ಸುಳ್ಯದಲ್ಲಿ ಎರಡು ವಾರದೊಳಗೆ ಆಧಾರ್ ಕೇಂದ್ರ ಪುನರಾರಂಭ

0

ನ.ಪಂ.‌ಸದಸ್ಯ ರಿಯಾಜ್ ಕಟ್ಟೆಕಾರ್

ಸುಳ್ಯದಲ್ಲಿ ಎರಡು ವಾರದೊಳಗೆ ಆಧಾರ್ ಕೇಂದ್ರ ಮತ್ತೆ ಆರಂಭವಾಗಲಿದೆ ಎಂದು ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್ ಸುದ್ದಿಗೆ ತಿಳಿಸಿದ್ದಾರೆ.

ಸುಳ್ಯದ ಅಂಚೆ ಕಚೇರಿಯಲ್ಲಿಯೇ ಆಧಾರ್ ಸೇವೆ ಆರಂಭವಾಗುತ್ತದೆ. ನನಗೆ ಬೆಂಗಳೂರು ಮುಖ್ಯಮಂತ್ರಿ ಗಳ ಕಾರ್ಯದರ್ಶಿ ಕಚೇರಿಯ ಯುಡಿಐ ಸೆಂಟರ್ ನಿಂದ ನಾನು ಸಲ್ಲಿಸಿದ್ದ ಮನವಿಯ ಮೇರೆಗೆ ನಿನ್ನೆ ಅಧಿಕಾರಿಗಳು ಕರೆ ಮಾಡಿ ಎರಡು ವಾರದಲ್ಲಿ ಮತ್ತೆ ಆರಂಭ ಮಾಡುವುದಾಗಿ ಹೇಳಿದ್ದಾರೆ.

ಈ ಹಿಂದೆ ಸುಳ್ಯದ ಅಂಚೆ ಕಚೇರಿ, ತಾಲೂಕು ಪಂಚಾಯತ್ ಇತ್ಯಾದಿ ಕಡೆಗಳಲ್ಲಿ ಆಧಾರ್ ಕೇಂದ್ರ ಇತ್ತು. ಬಳಿಕ ಅದನ್ನು ಸ್ಥಗಿತ ಮಾಡಲಾಗಿತ್ತು. ನನ್ನ ವಾರ್ಡ್ ಸೇರಿದಂತೆ ಇತರ ಭಾಗದ ಜನರು ನನ್ನೊಡನೆ ಸಮಸ್ಯೆ ಹೇಳಿಕೊಳ್ಳುತ್ತಿದ್ದರು. ಈ ಸಮಸ್ಯೆ ಪರಿಹಾರಕ್ಕಾಗಿ ನಾನು ಬೆಂಗಳೂರಿಗೆ ಹೋಗಿ ವಿಧಾನಸಭಾಧ್ಯಕ್ಷರ ಯು.ಟಿ.ಖಾದರ್, ಮುಖ್ಯಮಂತ್ರಿಗಳ ಕಾರ್ಯದರ್ಶಿಯವರಿಗೆ, ನಮ್ಮ‌ಜಿಲ್ಲೆಯ ಸಂಸದರಿಗೆ ಮನವಿ ಸಲ್ಲಿಸಿದ್ದೆ. ಮತ್ತು ನಾನು ಮನವಿ ಮಾಡಿದ ಬೆಂಗಳೂರಿನ ಕಚೇರಿ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೆ. ಇದೀಗ ನಿನ್ನೆ ನನಗೆ ನಿನ್ನೆ ಮುಖ್ಯಮಂತ್ರಿ ಗಳ ಕಾರ್ಯದರ್ಶಿ ಗಳ ಕಚೇರಿಯಿಂದ ಕರೆ ಮಾಡಿದ್ದಾರೆ. ಎರಡು ವಾರದಲ್ಲಿ ಆಧಾರ್ ಕೇಂದ್ರ ಆಗುತ್ತದೆ ಎಂದು‌ ತಿಳಿಸಿದ್ದಾರೆ ಎಂದು ರಿಯಾಜ್ ಕಟ್ಟೆಕಾರ್ ತಿಳಿಸಿದ್ದಾರೆ.

ಆಧಾರ್ ಸೇವೆ ಸುಳ್ಯದಲ್ಲಿ ಆಧಾರೆ ಜನರು ಪುತ್ತೂರು, ಬೆಳ್ಳಾರೆಗೆ ಹೋಗುವುದು ತಪ್ಪುತ್ತದೆ.