ಕುಂದಾಪುರ ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಮೇಲ್ವಿಚಾರಕಿಯಾಗಿ ಸುಳ್ಯದ ಶ್ರೀಮತಿ ರಶ್ಮಿತಾ ಕರ್ಕೇರ ನೇಮಕ

0

ಕುಂದಾಪುರ ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಮೇಲ್ವಿಚಾರಕಿಯಾಗಿ ಶ್ರೀಮತಿ ರಶ್ಮಿತಾ ಕರ್ಕೇರಾ ನೇಮಕವಾಗಿದ್ದಾರೆ.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು ,ಕರ್ನಾಟಕ ಲೋಕಸೇವಾ ಆಯೋಗದಿಂದ ಮೇಲ್ವಿಚಾರಕಿ ಹುದ್ದೆಗೆ ಇವರು ಆಯ್ಕೆಯಾಗಿದ್ದಾರೆ.
ಇವರು ಅಜ್ಜಾವರ ಗ್ರಾಮದ ಪೊಡುಂಬ ಪ್ರದೀಪ್ ಕುಮಾರ್ ರವರ ಪತ್ನಿಯಾಗಿದ್ದು ಆ. 6 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಇವರು ಪುತ್ತೂರು ತಾಲೂಕು ಮುಂಡೂರು ಗ್ರಾಮದ ನಾಡಾಜೆ ಶ್ರೀಮತಿ ರತ್ನಾವತಿ ಮತ್ತು ದಾಮೋದರ ಕರ್ಕೇರ ರವರ ಪುತ್ರಿ. ಅಜ್ಜಾವರ ಗ್ರಾಮದ ಪೊಡುಂಬ ಶ್ರೀಮತಿ ಸರಸ್ವತಿ ಮತ್ತು ರಾಮಣ್ಣ ಪೂಜಾರಿಯವರ ಸೊಸೆ.