














ಒಡಿಯೂರು ಶ್ರೀ ಗುರುದೇವಾನಂದ ಸ್ವಾಮಿಜಿಯವರ ಜನ್ಮದಿನೋತ್ಸವದ ಅಂಗವಾಗಿ ಮೂರು ಜಿಲ್ಲೆಗಳಲ್ಲಿ ಏಕ ಕಾಲದಲ್ಲಿ 365 ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ನಿಟ್ಟಿನಲ್ಲಿ ಗುತ್ತಿಗಾರು ವಲಯದ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಬೊಳ್ಳಜೆ ಘಟ ಸಮಿತಿ ವತಿಯಿಂದ, ಗ್ರಾಮ ಪಂಚಾಯತ್ ನೆಲ್ಲೂರು ಕೆಮ್ರಾಜೇ, ಶಿಕ್ಷಕವೃಂದ ಸರಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬೊಳ್ಳಜೆ, ಶಾಸ್ತಾವು ಯುವಕ ಮಂಡಲ ರೆಂಜಾಳ ಇವರ ಸಹಯೋಗದೊಂದಿಗೆ ಸರಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬೊಳ್ಳಜೆಯಲ್ಲಿ ಸ್ವಚ್ಛ ತಾ ಕಾರ್ಯಕ್ರಮ ವನ್ನು ನೆರವೇರಿಸಲಾಯಿತು.

ಸ್ವಚ್ಛ ತಾ ಕಾರ್ಯಕ್ರಮ ದ ಉದ್ಘಾಟನೆ ಯನ್ನು ದೀಪ ಬೆಳಗಿಸುವುದರೊಂದಿಗೆ ಶಾಲೆಯ ಶಿಕ್ಷಕರಾದ ಸೀತಾರಾಮ ರವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸುಳ್ಯ ತಾಲೂಕಿನ ಮೇಲ್ವಿಚಾರಕರಾದ ಗೀತಾ, ಬೊಳ್ಳಾಜೆ ಘಟ ಸಮಿತಿ ಅಧ್ಯಕ್ಷರಾದ ಸೀತಾರಾಮ ಚೆನ್ನಡ್ಕ, ಕಾರ್ಯದರ್ಶಿ ಚಂದ್ರಶೇಖರ ಹೈದಂಗೂರು , ಉಪಾಧ್ಯಕ್ಷರಾದ ಜಯಂತಿ ಹೈದಂಗೂರು ಪದಾಧಿಕಾರಿಗಳಾದ ಪುಷ್ಪಾವತಿ ಕಕ್ಕೆಬೆಟ್ಟು, ಪವಿತ್ರ ಕಕ್ಕೆಬೆಟ್ಟು, ಶಾಸ್ತವೂ ಯುವಕ ಮಂಡಲ ರೆಂಜಾಳ ಇದರ ಸದಸ್ಯರು, ಒ . ಶ್ರೀ. ಗ್ರಾಮವಿಕಾಸ ಯೋಜನೆಯ ಸದಸ್ಯರು ಭಾಗವಹಿಸಿದ್ದರು. ಗುತ್ತಿಗಾರು ವಲಯ ಸಂಯೋಜಕರಾದ ಸವಿತಾರವರು ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.










