ಸುಳ್ಯ ಬೋರುಗುಡ್ಡೆ ರಸ್ತೆ ದುರಸ್ತಿಗೆ SDPI ಮನವಿ ; ಅಧಿಕಾರಿಯಿಂದ ಭರವಸೆ

0

ಸುಳ್ಯ ,ಆಗಸ್ಟ್ 6 : ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಬೋರುಗುಡ್ಡೆ ಕಾರ್ಯತೋಡಿ ವಾರ್ಡ್ ನಲ್ಲಿ ಘನ ವಾಹನ ಸಂಚಾರದಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಪೂರ್ಣ ಕೆಸರುಮಯವಾಗಿದೆ. ಈ ಮೊದಲು ಹಲವು ಬಾರಿ ಮನವಿ ನೀಡಿದ್ದರೂ ಯಾವುದೇ ರೀತಿಯ ಸ್ಪಂದನೆ ಸಿಗಲಿಲ್ಲ. ಕೂಡಲೇ ರಸ್ತೆ ದುರಸ್ತಿ ಪಡಿಸಿ, ಸಂಚಾರ ಯೋಗ್ಯಗೊಳಿಸುವ ಬಗ್ಗೆ ಸುಳ್ಯ ನಗರ ಪಂಚಾಯತ್ ಮುಖ್ಯಅಧಿಕಾರಿಗಳಿಗೆ SDPI ಬೋರುಗುಡ್ಡೆ ವಾರ್ಡ್ ಸಮಿತಿ ವತಿಯಿಂದ ಮನವಿ ನೀಡಿದರು.

ಸಮಸ್ಯೆಯ ಗಂಭೀರತೆಯನ್ನು ಅರ್ಥ ಮಾಡಿಕೊಂಡ ಮುಖ್ಯ ಅಧಿಕಾರಿಗಳು
ಶೀಘ್ರದಲ್ಲೆ ರಸ್ತೆಯ ಅವ್ಯವಸ್ಥೆಯನ್ನು ಸರಿಪಡಿಸುವ ಭರವಸೆಯನ್ನು ನೀಡಿದ್ದಾರೆ.

ಈ ಸಂಧರ್ಭದಲ್ಲಿ ಎಸ್‌ಡಿಪಿಐ ನಾವೂರು ಬ್ರಾಂಚ್ ಅಧ್ಯಕ್ಷರಾದ ಅಝೀಜ್ ಕಚ್ಚು, ಕಾರ್ಯದರ್ಶಿ ಸಾಜೀದ್ ಬೋರುಗುಡ್ಡೆ, ಬ್ಲಾಕ್ ಸಮಿತಿ ಕಾರ್ಯದರ್ಶಿ ಸುಹೈಲ್, ಕಾರ್ಯಕರ್ತರಾದ ಮುಸ್ತಾಫಾ, ಅಬ್ದುಲ್ಲಾ ಅದ್ದು, ಸಿರಾಜ್ ಉಪಸ್ಥಿತರಿದ್ದರು.