ತಾಲೂಕು ಪಂಚಾಯತ್ ನಲ್ಲಿ ಆಟಿ ಕೂಟ

0

ಸಂಜೀವಿನಿ ಒಕ್ಕೂಟದವರು ತಯಾರಿಸಿದ ವಿವಿಧ ಬಗೆಯ ಖಾದ್ಯ ತಿನಿಸುಗಳು

ರಾಷ್ಟ್ರೀಯ ಜೀವನೋಪಾಯ ಅಭಿಯಾನ ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಸುಳ್ಯ, ಪಯಸ್ವಿನಿ ಸಂಜೀವಿನಿ ತಾಲೂಕು ಮಟ್ಠದ ಒಕ್ಕೂಟ ಸುಳ್ಯ ಇದರ ವತಿಯಿಂದ ಆಹಾರ, ಪೌಷ್ಠಿಕತೆ ಆರೋಗ್ಯ, ನೀರು ಮತ್ತು ನೈರ್ಮಲ್ಯದ ಬಗ್ಗೆ ಮಾಹಿತಿ ಹಾಗೂ ಆಟಿ ಕೂಟ ಸುಳ್ಯದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಂಜುಳಾ, ಇ.ಒ.‌ರಾಜಣ್ಣ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫಾ, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಶಾಹುಲ್‌ ಹಮೀದ್ ಕುತ್ತಮೊಟ್ಟೆ, ಬಿ.ಇ.ಒ. ಕೃಷ್ಣಪ್ಪ, ಎಡಿಎ ರವಿಚಂದ್ರ , ಶಾಸಕರ ಕಾರ್ಯದರ್ಶಿ ಹರೀಶ್, ತಾಲೂಕು ಪಂಚಾಯತ್ ಮ್ಯಾನೇಜರ್ ರಾಜಲಕ್ಷ್ಮಿ, ಆಪ್ತ ಸಮಾಲೋಚಕಿ ಆರ್ಥಿಕ ಸಾಕ್ಷರತ‌ಕೇಂದ್ರ ಕೆನರಾ ಬ್ಯಾಂಕ್ ನ ಸುಜಾತ ಮೊದಲಾದವರು ಇದ್ದರು.

ಮಾದಕವಸ್ತು ಗಳ ವಿರೋಧಿ ಆಂದೋಲನದ ‌ಜಾಗೃತಿ‌ ಬ್ಯಾನರ್ ಗಳನ್ನು ಸಮಾರಂಭದಲ್ಲಿ ಬಿಡುಗಡೆ ಅನಾವರಣ ಮಾಡಲಾಯಿತು.

ಆಟಿ ಕೂಟದಲ್ಲಿ ದುರ್ಗಾ ಮಾತಾ ಸಂಜೀವಿನಿ ಒಕ್ಕೂಟ ಅರಂತೋಡು, ಜಾಲ್ಸೂರು ಸಂಜೀವಿನಿ ಒಕ್ಕೂಟ, ಪೆರುವಾಜೆ ಗ್ರಾಮ ಸ್ನೇಹಿ ಸಂಜೀವಿನಿ ಒಕ್ಕೂಟ, ಬೆಳ್ಳಾರೆ ಲಕ್ಷ್ಮೀ ಸಂಜೀವಿನಿ ಒಕ್ಕೂಟ, ಕೊಡಿಯಾಲ ಶ್ರೀ ಗೌರಿ ಸಂಜೀವಿನಿ ಒಕ್ಕೂಟ, ಐವರ್ನಾಡು ಸಮಗ್ರ ಸಂಜೀವಿನಿ ಒಕ್ಕೂಟ, ಉಬರಡ್ಕ ಮಿತ್ತೂರು ಮಿತ್ತೂರು ನಾಯರ್ ಸಂಜೀವಿನಿ ಒಕ್ಕೂಟ, ಮಂಡೆಕೋಲು ಅಕ್ಷಯ ಸಂಜೀವಿನಿ ಒಕ್ಕೂಟ, ಗುತ್ತಿಗಾರು ಅಮರ ಸಂಜೀವಿನಿ ಮಾದರಿ ಒಕ್ಕೂಟ, ದೇವಚಳ್ಳ ಶ್ರೀ ವಿಷ್ಣು ಸಂಜೀವಿನಿ ಒಕ್ಕೂಟ, ಆಲೆಟ್ಟಿ ಲಕ್ಷ್ಮೀ ಸಂಜೀವಿನಿ ಒಕ್ಕೂಟ, ಅಜ್ಜಾವರ ಶ್ರೀ ರಕ್ಷಾ ಸಂಜೀವಿನಿ ಒಕ್ಕೂಟ, ಅಮರಮುಡ್ನೂರು ಶ್ರೀವಿಷ್ಣು ಸಂಜೀವಿನಿ ಒಕ್ಕೂಟ, ಸಂಪಾಜೆ ಶ್ರೀ ವಿಷ್ಣು ಸಂಜೀವಿನಿ ಒಕ್ಕೂಟ, ಮರ್ಕಂಜ ಪಂಚಶ್ರೀ ಸಂಜೀವಿನಿ ಒಕ್ಕೂಟ, ಮಡಪ್ಪಾಡಿ ಅಕ್ಷಯ ಸಂಜೀವಿನಿ ಒಕ್ಕೂಟ, ಕನಕಮಜಲು ಶ್ರೀಹರಿ ಸಂಜೀವಿನಿ ಒಕ್ಕೂಟ, ಕಳಂಜ ಪಂಚಮಿ ಸಂಜೀವಿನಿ ಒಕ್ಕೂಟ, ಕೊಲ್ಲಮೊಗ್ರ ಕೀರ್ತಿ ಸಂಜೀವಿನಿ ಒಕ್ಕೂಟ, ಪಂಜ ಪಂಚಮ ಸಂಜೀವಿನಿ ಒಕ್ಕೂಟದವರು ತಯಾರಿಸಿದ ಹಲಸಿನ ಕಾಯಿ ತಿನಿಸುವ, ಚಟ್ನಿ, ಪತ್ರೊಡೆ, ಪಾಯಸ, ಅರಶಿನ ಹಿಟ್ಟು, ಮಂಡಕ್ಕಿ ಚುರುಮುರಿ, ತಜಂಕ್ ಪಲ್ಯ, ಹಲಸಿನ ಹಣ್ಣಿನ ಕ್ಷೀರ, ಚಕ್ಕೆ ಪಲ್ಯ, ಹಲಸಿನ‌ಬೀಜದ ಚಟ್ನಿ ಪುಡಿ, ಈರೇಲು ಎಲೆಯ ನೆಯಿ ಅಪ್ಪ, ಕಣಿಲೆ ಪಲ್ಯ, ನುಗ್ಗೆ ಸೊಪ್ಪು, ಕಾಳುಮೆಣಸಿನ ಚಾಕೊಲೇಟ್, ಪಾನಕ, ಆಟಿ ಸೊಪ್ಪಿನ ಹಲ್ವ, ಗೋದಿ ಕಡಿ, ಹಲಸಿನ ಬೀಜದ ಪಾಯಸ, ಮೆಂಟೆ ಹಿಟ್ಟು, ಪೂಂಬೆ ಪಲ್ಯ, ತಿಮರೆ ಪಲ್ಯ, ಹುಣಸೆ ಉಪ್ಪಿನಕಾಯಿ, ಅನ್ನ – ಸಾಂಬಾರು ಹೀಗೆ ಒಟ್ಟು ವಿಶೇಷ ಖಾದ್ಯಗಳಿದ್ದವು.

ಅತೀ ಹೆಚ್ಚು ಸಂಖ್ಯೆಯಲ್ಲಿ ಖಾದ್ಯಗಳನ್ನು ತಯಾರಿಸಿದ ಉತ್ಪನ್ನಗಳನ್ನು ತಂದಿದ್ದಾರೆಂದು ಸಂಪಾಜೆ ಹಾಗೂ ಅರಂತೋಡು ಮತ್ತು ಪೆರುವಾಜೆ ತಂಡವನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಭಾಗವಹಿಸಿದ ಎಲ್ಲಾ ಒಕ್ಕೂಟದವರಿಗೂ ಪ್ರಮಾಣಪತ್ರ ವಿತರಿಸಲಾಯಿತು.

ಸಂಜೀವಿನಿ ಒಕ್ಕೂಟದ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಶ್ವೇತಾ ಕಾರ್ಯಕ್ರಮ ‌ನಿರ್ವಹಿಸಿದರು.