ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘ ಇದರ ಮರಾಟಿ ಮಹಿಳಾ ವೇದಿಕೆಯ ವತಿಯಿಂದ ಆಟಿ ಕೂಟ ಕಾರ್ಯಕ್ರಮ ಇಂದು ಗಿರಿದರ್ಶಿನಿ ಸಭಾಭವನದಲ್ಲಿ ನಡೆಯಿತು.
















ಕಾರ್ಯಕ್ರಮವನ್ನು ಮರಾಟಿ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ ದೇವಪ್ಪ ನಾಯ್ಕ ಹೊನ್ನೇಡಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ರೇವತಿ ದೊಡ್ಡೇರಿ ವಹಿಸಿದ್ದರು. ಗೌರವಾಧ್ಯಕ್ಷೆ ಶ್ರೀಮತಿ ಗಿರಿಜಾ ಎಂ.ವಿ. ಆಟಿ ಆಚರಣೆಯ ಬಗ್ಗೆ ಮಾತನಾಡಿದರು. ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಅಜ್ಜಾವರ, ಕಾರ್ಯದರ್ಶಿ ರಮೇಶ್ ನೀರಬಿದಿರೆ ಶುಭ ಹಾರೈಸಿದರು.
ಮಹಿಳಾ ವೇದಿಕೆಯ ಶ್ರೀಮತಿ ವೇದಾವತಿ ಪ್ರಾರ್ಥಿಸಿದರು.ಶ್ರೀಮತಿ ನಳಿನಾಕ್ಷಿ ಬೇರ್ಪಡ್ಕ ಸ್ವಾಗತಿಸಿ, ಶ್ರೀಮತಿ ಮೀನಾಕ್ಷಿ ಭಸ್ಮಡ್ಕ ವಂದಿಸಿದರು. ಶ್ರೀಮತಿ ಶೋಭಾ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ಚೆನ್ನಮಣೆ ಆಟದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಳಿಕ ಆಟಿ ಕೂಟದ ಸಲುವಾಗಿ ಮಹಿಳಾ ವೇದಿಕೆಯ ಸದಸ್ಯರು ಮನೆಯಲ್ಲಿ ತಯಾರಿಸಿ ತಂದ ಸುಮಾರು 20 ತರಹದ ಖಾದ್ಯಗಳನ್ನು ಸವಿಯಲಾಯಿತು.











