














ಅರಂತೋಡು– ತೊಡಿಕಾನ ಗ್ರಾಮದ ನೂತನ ಗ್ರಾಮ ಆಡಳಿತಾಧಿಕಾರಿಯಾಗಿ ಶ್ರೀನಿವಾಸ್ ರವರು ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ಇವರು ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಉಳಿಮಾವು ಗ್ರಾಮದವರಾಗಿದ್ದು ಹೊಸದಾಗಿ ನೇಮಕಗೊಂಡವರು ಅರಂತೋಡು ಗ್ರಾಮ ಆಡಳಿತಾಧಿಕಾರಿಯ ಕೊರತೆ ಬಗ್ಗೆ ಕೆಡಿಪಿ ಸಭೆಯಲ್ಲಿ ಸದಸ್ಯ ಅಶ್ರಫ್ ಗುಂಡಿ ಪ್ರಸ್ತಾಪಿಸಿರುವುದಲ್ಲದೆ ಕಂದಾಯ ಸಚಿವ ಕೃಷ್ಣ ಬೈರೇ ಗೌಡರಿಗೂ ಮನವಿ ಸಲ್ಲಿಸಿದ್ದರು










