ಪಂಜ: ಶ್ರೀ ಶಾರದೋತ್ಸವ -2025 ಪೂರ್ವಭಾವಿ ಸಭೆ: ಸಮಿತಿ ರಚನೆ

0

ಪಂಜದ ನಾಡ ಹಬ್ಬ 16ನೇ ವರುಷದ ಶ್ರೀ ಶಾರದೋತ್ಸವ-2025 ಇದರ ಪೂರ್ವಭಾವಿ ಸಭೆ ಮತ್ತು ಶಾರದೋತ್ಸವ ಸಮಿತಿ ರಚನೆ ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದ ಸಭಾಭವನದಲ್ಲಿ ಆ.6 ರಂದು ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ ರವರ ಸಭಾಧ್ಯಕ್ಷತೆಯಲ್ಲಿ ನಡೆಯಿತು.


ಸಭೆಯಲ್ಲಿ ಶಾರದೋತ್ಸವ-2025 ಸಮಿತಿಗೆ ಪದಾಧಿಕಾರಿಗಳು ಮತ್ತು ಸಂಚಾಲಕರು ,ಸದಸ್ಯರನ್ನು ಆಯ್ಕೆ ಮಾಡಲಾಯಿತು.ವೇದಿಕೆಯಲ್ಲಿ ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷ ಮಾಧವ ಗೌಡ ಜಾಕೆ, ಭಜನಾ ಮಂಡಳಿಯ ಆಂತರಿಕ ಲೆಕ್ಕಪರಿಶೋಧಕ ಬಾಲಕೃಷ್ಣ ಗೌಡ ಕುದ್ವ, ಶಾರದೋತ್ಸವ-2025 ರ ಸಮಿತಿಯ ಅಧ್ಯಕ್ಷ ದಾಮೋದರ ಗೌಡ ಪಲ್ಲೋಡಿ, ನಿಕಟಪೂರ್ವಾಧ್ಯಕ್ಷ ಮೋನಪ್ಪ ಗೌಡ ಬೊಳ್ಳಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಭಜನಾ ಮಂಡಳಿಯ ಕಾರ್ಯದರ್ಶಿ ಗುರು ಪ್ರಸಾದ್ ತೋಟ ಸ್ವಾಗತಿಸಿದರು ಮತ್ತು ವಂದಿಸಿದರು.