ಭಕ್ತಾದಿಗಳ ಸುರಕ್ಷತೆಗೆ ವಸತಿ ಗೃಹಗಳು ಕಟ್ಟುನಿಟ್ಟಿನ ಕ್ರಮ ಪಾಲಿಸುವಂತೆ ಎಸ್.ಐ. ಕಾರ್ತಿಕ್ ಸೂಚನೆ

ಸುಬ್ರಹ್ಮಣ್ಯದಲ್ಲಿ ವಸತಿಗೃಹ ಮಾಲಕ, ನಿರ್ವಾಹಕರ ಸಭೆ ಆ.6 ರಂದು ಸುಬ್ರಹ್ಮಣ್ಯ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕ ಕಾರ್ತಿಕ್
ಖಾಸಗಿ ವಸತಿ ಗೃಹಗಳು ಕೊಠಡಿ ನೀಡಿ ತಂಗಲು ವ್ಯವಸ್ಥೆ ಕಲ್ಪಿಸಿರುವುದು ಸರ್ವೇಸಾಮಾನ್ಯ ಆದರೆ ಖಾಸಗಿ ಅನಧಿಕೃತ ವಸತಿಗೃಹಗಳು ಭಕ್ತಾದಿಗಳಿಗೆ ಕಿರುಕುಳ ನೀಡುವುದು ಸೌಜನ್ಯತೆಯಿಂದ ವರ್ತಿಸದೇ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಅಂತಹ ವಸತಿ ಗೃಹಗಳ ಮಾಲಕರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ನಾವು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಬರುವ ಭಕ್ತಾದಿಗಳ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡುತ್ತೇವೆ ಎಂದು ಹಾಗೂ ಈ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು
ಸಭೆಯಲ್ಲಿ ಮಾಹಿತಿ ನೀಡುತ್ತಾ ಹೇಳಿದರು.















ಸಭೆಯಲ್ಲಿ ವಸತಿಗೃಹದಲ್ಲಿ ತಂಗುವ ಭಕ್ತಾದಿಗಳೊಂದಿಗೆ ಸೌಜನ್ಯದಿಂದ ವರ್ತಿಸವಂತೆ ಸೂಚಿಸಲಾಯಿತು.
ಒಬ್ಬರೇ ಭಕ್ತ ಕ್ಷೇತ್ರಕ್ಕೆ ಬಂದಲ್ಲಿ ಅವರ ಸಂಪೂರ್ಣ ಮಾಹಿತಿ ಪಡೆದುಕೊಳ್ಳದೆ ಕೊಠಡಿ ನೀಡಬಾರದು. ವಾಡಿಕೆಯಲ್ಲಿ ಇರುವುದಕ್ಕಿಂತ ಅಧಿಕ ಬಾಡಿಗೆ ವಸೂಲು ಮಾಡಬಾರದು.
ವಸತಿ ಗೃಹಗಳ ಮಾಲಕರು ಲೈಸೆನ್ಸ್, ಬಿಲ್ ಪುಸ್ತಕ, ರಿಜಿಸ್ಟರ್ ಪುಸ್ತಕ ಕಡ್ಡಾಯವಾಗಿ ದಾಖಲಿಸುವುದು, ಆಧಾರ್ ಕಾರ್ಡ್ ಪಡೆಯುವುದು, ಸಿ ಸಿ ಕ್ಯಾಮೆರಾ ಅಳವಡಿಸುವುದು.
ಕೊಠಡಿ ನೀಡುವ ವಿಚಾರದಲ್ಲಿ ದಲ್ಲಾಳಿ ಕೆಲಸ ಯಾರು ಮಾಡದಂತೆ. ಮಹಿಳಾ ಭಕ್ತಾದಿಗಳಿಗೆ ಕಿರುಕುಳ ನೀಡುವುದು ದೂರವಾಣಿ ನಂಬರ್ ನ್ನು ಅನಪೇಕ್ಷಿತವಾಗಿ ಬಳಸದಂತೆ. ದೇವಸ್ಥಾನಗಳ ದೇವಳದ ವಸತಿಗೃಹದ ಎದುರುಗಡೆ ರೂಂ ಕರೆಯದಂತೆ, ಪ್ರತಿ ಖಾಸಗಿ ವಸತಿ ಗೃಹ ದವರು ಅವರ ಲಾಡ್ಜ್ ಬಳಿಯೇ ವಾಹನಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ಸೂಚನೆಗಳನ್ನು ನೀಡಲಾಯಿತು. ವಸತಿಗೃಹದಲ್ಲಿ ಏನೇ ಸಮಸ್ಯೆಗಳು ಬಂದರೂ ಪೊಲೀಸ್ ಸ್ಟೇಷನ್ ಗೆ ಮಾಹಿತಿ ತಿಳಿಸಿ ಅಥವಾ ಕಂಪ್ಲೇಂಟ್ ನೀಡುವಂತೆ ಕೋರಲಾಯಿತು.
ಸೂಚನೆಗಳನ್ನು ಪಾಲಿಸದೆ ಇದ್ದ ವಸತಿ ಗೃಹದ ಮಾಲಕರನ್ನೇ ಪ್ರಥಮ ಆರೋಪಿಯನ್ನಾಗಿ ಮಾಡಲಾಗುವುದು ಎಂದು ಸಭೆಗೆ ತಿಳಿಸಲಾಯಿತು.
ಸುಬ್ರಹ್ಮಣ್ಯ ಗ್ರಾ. ಪಂ. ಅಧ್ಯಕ್ಷೆ ಸುಜಾತ ಕಲ್ಲಾಜೆ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ರಾಜೇಶ್ ಏನ್. ಎಸ್, ಸದಸ್ಯಾದ ದಿಲೀಪ್ ಉಪ್ಪಳಿಕೆ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ ನಕ್ರಾಜೆ, ಸೌಮ್ಯ ಭರತ್, ದೇವಳದ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಯೇಸುರಾಜ್, ಕಡಬ ತಾಲ್ಲೂಕು ಕೆ.ಡಿ.ಪಿ ಸದಸ್ಯರಾದ ಶಿವರಾಮ ರೈ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಸ್ವಾಗತಿಸಿದರು. ಕಾರ್ಯದರ್ಶಿ ಮೋನಪ್ಪ ಡಿ ಧನ್ಯವಾದ ಸಮರ್ಪಿಸಿದರು.










