ಜೆಸಿಐ ಸುಳ್ಯ ಸಿಟಿ ಘಟಕದ ವತಿಯಿಂದ ಸುಳ್ಯದ ಮ್ಯಾಟ್ರಿಕ್ಸ್ ವಿದ್ಯಾಸಂಸ್ಥೆಯಲ್ಲಿ
ಅ. 2ರಂದು ಆಟಿ ಉತ್ಸವವು ನಡೆಯಿತು.
ವಲಯಾಧಿಕಾರಿ ಜೆಸಿ ಚಂದ್ರಶೇಖರ ಕನಕಮಜಲು ಕಾರ್ಯಕ್ರಮ ಉದ್ಘಾಟಿಸಿದರು.















ಸಂಪನ್ಮೂಲ ವ್ಯಕ್ತಿಯಾಗಿ ಎ.ಒ.ಎಲ್.ಇ.ಕಮಿಟಿ ‘ಬಿ’ಯ ಆಡಳಿತಾಧಿಕಾರಿ ಭವಾನಿ ಶಂಕರ ಅಡ್ತಲೆ ಪಾಲ್ಗೊಂಡರು.
ಜೆಸಿಐ ಸುಳ್ಯ ಸಿಟಿ ಘಟಕದ ನಿಕಟಪೂರ್ವ ಅಧ್ಯಕ್ಷ ವಿಷ್ಣು ಪ್ರಕಾಶ್ ನಾರ್ಕೋಡು ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಕಾರ್ಯದರ್ಶಿ ಜೆಸಿ ತೇಜಸ್ವಿ ನಾರ್ಕೋಡು ವಂದಿಸಿದರು.
ಈ ಸಂದರ್ಭದಲ್ಲಿ ಜೆಸಿಐ ಸುಳ್ಯ ಸಿಟಿ ಘಟಕದ ಸಾಧನಾ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಜೆಸಿ ನಾಗವೇಣಿ ದಾಮೋದರ ಕೋರಡ್ಕ ,ಜೆಸಿಮನಮೋಹನ್ ಬಳ್ಳಡ್ಕ ಸ್ಥಾಪಕರು ಜೆಸಿಐ ಸುಳ್ಯ ಸಿಟಿ, ಜೆಸಿಐ ಸುಳ್ಯ ಪಯಸ್ವಿನಿಯಪೂರ್ವಾಧ್ಯಾಕ್ಷ ಜೆಸಿ ಭೀಮರಾವ್ ವಾಷ್ಠರ್, ಜೆಸಿಐ ಸುಳ್ಯ ಸಿಟಿ ಘಟಕದ ಉಪಾಧ್ಯಕ್ಷೆ ಜೆಸಿ ಪ್ರಮೀಳಾ ಮನಮೋಹನ್ ಬಳ್ಳಡ್ಕ, ಪೂರ್ವಾಧ್ಯಕ್ಷ ಜೆಸಿ ರಂಜಿತ್ ಚೊಕ್ಕಾಡಿ, ಜೆಸಿ ಹಿತೇಶ್ ಅರ್ಭಡ್ಕ ಮತ್ತು ಮ್ಯಾಟ್ರಿಕ್ಸ್ ವಿದ್ಯಾಸಂಸ್ಥೆಯಪ್ರಾಂಶುಪಾಲರುಉಪನ್ಯಾಸಕವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆಟಿಯ ವಿಶೇಷ ಆಹಾರ ಖಾದ್ಯಗಳಿದ್ದವು.










