ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಮಹಿಳಾ ಮೋರ್ಚಾದ ವತಿಯಿಂದ ಡಿ ಆರ್ ಗಾರ್ಮೆಂಟ್ಸ್ ಭೇಟಿ

0


ರಾಷ್ಟ್ರೀಯ ಕೈಮಗ್ಗದ ದಿನಾಚರಣೆಯ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಮಹಿಳಾ ಮೋರ್ಚಾದ ವತಿಯಿಂದ ಹಳೆಗೇಟಿನಲ್ಲಿರುವ ಡಿ ಆರ್ ಗಾರ್ಮೆಂಟ್ಸ್ ಮಳಿಗೆಗೆ ಭೇಟಿ ನೀಡಲಾಯಿತು. ಅಲ್ಲಿ ಖಾದಿ ಬಟ್ಟೆಗಳ ವ್ಯಾಪಾರ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಮಾಲಕ ರಾಮಚಂದ್ರರಿಗೆ ಸುಳ್ಯ ಮಹಿಳಾ ಮೋರ್ಚಾದ ವತಿಯಿಂದ ಸನ್ಮಾನಿಸಲಾಯಿತು.


ಸುಳ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಶಶಿಕಲಾ ಎ. ನೀರಬಿದಿರೆ, ಶ್ರೀಮತಿ ಲೋಲಾಕ್ಷಿ, ಮಹಿಳಾ ಮೋರ್ಚಾದ ಕಾರ್ಯದರ್ಶಿ ಭಾರತಿ ಪುರುಷೋತ್ತಮ, ಮಂಡಲ ಪ್ರಧಾನ ಕಾರ್ಯದರ್ಶಿ ಪುಷ್ಪಾ ಮೇದಪ್ಪ, ದಿವ್ಯ ಮಡಪ್ಪಾಡಿ, ರಜನಿ ಶರತ್ ಉಪಸ್ಥಿತರಿದ್ದರು. ಜೊತೆಗೆ ಕೆಲಸ ನಿರ್ವಹಿಸುತ್ತಿರುವ ೩೫ ಮಂದಿ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.