ರಕ್ತದಾನಿ ಪಿ.ಬಿ. ಸುಧಾಕರ್ ರೈಯವರಿಂದ ಸುಳ್ಯದ ಅಮರ ಶಿಲ್ಪಿ ದಿ. ಕುರುಂಜಿ ವೆಂಕಟರಮಣ ಗೌಡರ ಸ್ಮರಣಾರ್ಥವಾಗಿ ರಕ್ತದಾನ

0

ಸುಳ್ಯದ ಅಮರ ಶಿಲ್ಪಿ ದಿವಂಗತ ಡಾ.ಕುರುಂಜಿ ವೆಂಕಟರಮಣ ಗೌಡ ರವರ 12ನೇ ವರ್ಷದ ಪುಣ್ಯತಿಥಿ ಇದರ ಅಂಗವಾಗಿ ಆ 7 ರಂದು ಸುಳ್ಯದ ಹಿರಿಯ ರಕ್ತ ದಾನಿ ಪಿ ಬಿ ಸುಧಾಕರ್ ರೈ ರವರು ರಕ್ತ ದಾನ ಮಾಡುವ ಮೂಲಕ ಕೆ ವಿ ಜಿ ಯವರನ್ನು ಸ್ಮರಿಸಿ ಕ್ಕೊಂಡಿದ್ದಾರೆ.

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ರಕ್ತ ನಿಧಿಯಲ್ಲಿ ರಕ್ತದಾನದ ಮುಖಾಂತರ ಶ್ರದ್ಧಾಂಜಲಿಯನ್ನು ಅವರು ಸಮರ್ಪಿಸಿದ್ದಾರೆ.

ನಿರಂತರವಾಗಿ ರಕ್ತದಾನ ಮಾಡುವ ಪರಿಪಾಠವನ್ನು ಕಳೆದ 48 ವರ್ಷಗಳಿಂದ ರೂಡಿಸಿಕೊಂಡು ಬಂದಿರುವ ಇವರು ಕೆ ವಿ ಜಿ ಯವರು ನಿಧನರಾಗಿ 12 ವರ್ಷಗಳು ಸಂದರು ಅವರ ನೆನಪಿನಲ್ಲಿ ಪ್ರತಿ ವರ್ಷ ಅವರ ಪುಣ್ಯ ತಿಥಿಯಂದು ಅವರ ಸ್ಮರಣಾರ್ಥವಾಗಿ ರಕ್ತ ದಾನ ಮಾಡಿಕ್ಕೊಂಡು ಬರುತ್ತಿದ್ದಾರೆ.

ಈ ಬಗ್ಗೆ ಸುದ್ದಿಯೊಂದಿಗೆ ಮಾತನಾಡಿರುವ ಅವರು ‘ಸುಳ್ಯಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದಂತ ಪೂಜ್ಯರನ್ನು ಸ್ಮರಿಸಿಕೊಳ್ಳುವುದು ನಮ್ಮ ಧರ್ಮ.ಸುಳ್ಯದಲ್ಲಿ ಅವರು ಕಟ್ಟಿ ಬೆಳೆಸಿದ ವಿದ್ಯಾ ಸಂಸ್ಥೆಗಳಿಂದಾಗಿ ಸುಳ್ಯ ನಗರ ಇಂದು ಇಷ್ಟೊಂದು ಬೆಳೆಯಲು ಸಾಧ್ಯವಾಗಿದೆ.ಅವರ ಕುಟುಂಬದಲ್ಲಿ ಒಗ್ಗಟ್ಟು ಮತ್ತು ಆಯುರಾರೋಗ್ಯ ಹೆಚ್ಚಾಗಲಿ ಎಂದು ಆತ್ಮ ಸಾಕ್ಷಿಯಾಗಿ ವಿಶೇಷವಾಗಿ ಈ ಮೂಲಕ ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.