ಸುಳ್ಯದ ಕೊಡಿಯಾಲಬೈಲು ಮಹಾತ್ಮ ಗಾಂಧಿ ಮಲ್ನಾಡ್ ವಿದ್ಯಾಸಂಸ್ಥೆಯಲ್ಲಿ ಕಲಾತ್ಮಕ ಚಟುವಟಿಕೆಗಳು ಹಾಗೂ ಸ್ಕೌಟ್ಸ್ – ಗೈಡ್ಸ್ ನ ಆರಂಭ ಮತ್ತು ಶಾಲಾ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ ಆ.8ರಂದು ನಡೆಯಿತು.
ಸಂಸ್ಥೆಯ ಸಂಚಾಲಕರಾದ ದೊಡ್ಡಣ್ಣ ಬರೆಮೇಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಗೌಡ ಸೋಶಿಯೊ ಎಜುಕೇಷನ್ ಫೌಂಡೆಷನ್ ಅಧ್ಯಕ್ಷರಾದ ಪಿ.ಎಸ್.ಗಂಗಾಧರ್ ವಹಿಸಿದ್ದರು.
ವಿ.ಟಿ.ಯು. ಬೆಳಗಾವಿಯ ನಿವೃತ್ತ ಪ್ರಾದೇಶಿಕ ನಿರ್ದೇಶಕರು ಮತ್ತು ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲರಾದ ಡಾ. ಶಿವಕುಮಾರ್ ಹೊಸಳಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಸ್ತುತ ಸಮಾಜದಲ್ಲಿ ಶಿಕ್ಷಣದ ಮಹತ್ವದ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರೇಮಲತಾ ವಿದ್ಯಾರ್ಥಿಗಳಿಗೆ ಸ್ಕೌಟ್ಸ್ – ಗೈಡ್ಸ್ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ಶಾಲಾ ಮಂತ್ರಿಮಂಡಲದ ವಿದ್ಯಾರ್ಥಿ ನಾಯಕರುಗಳಿಗೆ ಪ್ರಮಾಣವಚನ ಬೋಧಿಸಿದರು.















ಗೌಡ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ಮುಖ್ಯ ಅತಿಥಿಗಳಾಗಿದ್ಧರು.
ವೇದಿಕೆಯಲ್ಲಿ ಸಂಸ್ಥೆಯ ಪೂರ್ವ ಅಧ್ಯಕ್ಷರಾದ ದಿನೇಶ್ ಮಡಪ್ಪಾಡಿ, ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು, ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಶ್ವೇತಾ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯಲಕ್ಷ್ಮೀ, ಗೈಡ್ ಶಿಕ್ಷಕಿ ಪರಿಮಳ ಮತ್ತು ಸ್ಕೌಟ್ ಶಿಕ್ಷಕಿ ಭಾವನ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೌಡ ಸೋಶಿಯೊ ಎಜುಕೇಷನ್ ಫೌಂಡೇಶನ್ ನ ನಿರ್ದೇಶಕರುಗಳಾದ ಬೆಳ್ಯಪ್ಪ ಗೌಡ, ಪುಷ್ಪಾವತಿ ರಾಧಾಕೃಷ್ಣ ಮಾಣಿಬೆಟ್ಟು, ಸಂಸ್ಥೆಯ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳ ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.










