ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

0

ಹರಿಹರ ಪಲ್ಲತಡ್ಕ, ಬಾಳುಗೋಡು, ಐನೆಕಿದು ಗ್ರಾಮಗಳ ಸಹಭಾಗಿತ್ವದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ವತಿಯಿಂದ ಆ.8 ರಂದು ಹರಿಹರೇಶ್ವರ ದೇವಾಲಯದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ ನಡೆಯಿತು.

ವರಮಹಾಲಕ್ಷ್ಮೀ , ಹರಿಹರೇಶ್ವರನ ಪೂಜೆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಶ್ರೀಮತಿ ಗೀತಾ ವಿಶ್ವನಾಥ ಬಿಳಿಮಲೆ, ಕಾರ್ಯದರ್ಶಿ ಶ್ರೀಮತಿ ಮನೋರಮಾ, ಕೋಶಾಧಿಕಾರಿ ಶ್ರೀಮತಿ ವಿಜಯ ಕೂಜುಗೋಡು,
ಗೌರವಾಧ್ಯಕ್ಷೆ ಶ್ರೀಮತಿ ಹರ್ಷಿಣಿ ಕಟ್ಟೆಮನೆ, ಸ್ಥಾಪಾಕಾಧ್ಯಕ್ಷೆ ಶ್ರೀಮತಿ ತಾರಾ ಮಲ್ಲಾರ, ಸಮಿತಿ ಸದಸ್ಯರು,, ಅರ್ಚಕ ಸುಬ್ರಹ್ಮಣ್ಯ ನರಸಿಂಹ ಭಟ್ , ದೇವಾಲಯದ ಸಿಬ್ಬಂದಿ ಲೋಕನಾಥ್ ಮತ್ತಿತರರು ಕಾರ್ಯಕ್ರಮ ಯಶಸ್ವಿಗೆ ದುಡಿದರು. ದೇವಾಲಯದ ಆಡಳಿತಾಧಿಕಾರಿ ರಾಜಣ್ಣ , ವ್ಯವಸ್ಥಾಪನಾ ಸಮಿತಿಯ ನಿಟಕ ಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು, ಸದಸ್ಯರು, ಅಭಿವೃದ್ಧಿ ಸಮಿತಿ ಸದಸ್ಯರು, ನೂರಾರು ಭಕ್ತರು ಉಪಸ್ಥಿತರಿದ್ದರು.