ಅಲೆಟ್ಟಿ ಸದಾಶಿವ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

0

ಅಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ.8 ರಂದು ಪುರೋಹಿತ್ ವೆಂಕಟೇಶ್ ಶಾಸ್ತ್ರೀ ಯವರ ನೇತೃತ್ವದಲ್ಲಿ ನಡೆಯಿತು.

ಬೆಳಿಗ್ಗೆ ಗಂಟೆ 9.00 ಕ್ಕೆ ಪೂಜೆ ಪ್ರಾರಂಭಗೊಂಡಿತು.
ನೂರಾರು ಜನ ಮಾತೆಯರು
ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಮಧ್ಯಾಹ್ನ ಮಹಾಮಂಗಳಾರತಿಯಾಗಿ ಪೂಜೆಯು ನೆರವೇರಿತು.

ದೇವಸ್ಥಾನದಲ್ಲಿ ಸದಾಶಿವ ದೇವರಿಗೆ ಅರ್ಚಕ ಹರ್ಷಿತ್ ಬನ್ನಿಂತಾಯರ ನೇತೃತ್ವದಲ್ಲಿ ವಿಶೇಷ ಪೂಜೆಯು ನಡೆಯಿತು.
ಆಗಮಿಸಿದ ಭಕ್ತಾದಿಗಳಿಗೆ ಮಹಾಲಕ್ಷ್ಮಿ ದೇವಿಯ ಪ್ರಸಾದ ವಿತರಣೆ ಮಾಡಲಾಯಿತು. ಬಳಿಕ ಸಾರ್ವಜನಿಕ ಅನ್ನಪ್ರಸಾದ ವಿತರಣೆಯಾಯಿತು.


ಈ ಸಂದರ್ಭದಲ್ಲಿ ಮೊಕ್ತೇಸರರಾದ
ಹೇಮಚಂದ್ರ ಬೈಪಾಡಿತ್ತಾಯ, ಶ್ರೀಪತಿ ಬೈಪಾಡಿತ್ತಾಯ, ಜಯಪ್ರಕಾಶ್ ಬೈಪಾಡಿತ್ತಾಯ, ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೊಲ್ಚಾರ್,ಪೂರ್ವಾಧ್ಯಕ್ಷ ರತ್ನಾಕರ ಕುಡೆಕಲ್ಲು, ಪ್ರಸನ್ನ ಕೆ. ಸಿ ಬಡ್ಡಡ್ಕ, ಸಮಿತಿ ಮಾಜಿ ಸದಸ್ಯರಾದ ಅಚ್ಚುತ್ತ ಮಣಿಯಾಣಿ ಅಲೆಟ್ಟಿ, ಹರಿಪ್ರಸಾದ್ ಗಬ್ಬಲ್ಕಜೆ, ಮಮತಾ ನಾರ್ಕೋಡು, ನಳಿನಿ ರೈ ಅಲೆಟ್ಟಿ, ಕಾರ್ಯದರ್ಶಿ ರಾಮಚಂದ್ರ ಅಲೆಟ್ಟಿ, ಭಜನಾ ಸಂಘದ ಅಧ್ಯಕ್ಷ ಶಿವಪ್ರಸಾದ್ ಅಲೆಟ್ಟಿ, ಕೋಶಾಧಿಕಾರಿ ಸುಂದರ ಅಲೆಟ್ಟಿ, ಲಕ್ಶ್ಮಣ ಗೌಡ ಉಳಿಯ, ರಾಮಚಂದ್ರ ಬಾಲೆಬಲ್ಪು, ವಸಂತ ಬಿ,
ನವೀನ್ ಕುಮಾರ್ ಅಲೆಟ್ಟಿ, ಮಹಾಬಲ ರೈ ಅಲೆಟ್ಟಿ, ನಾರಾಯಣ ರೈ ಅಲೆಟ್ಟಿ ಹಾಗೂ ಸ್ಥಳೀಯ ಭಕ್ತಾದಿಗಳು ಭಾಗಾವಹಿಸಿದರು.