ಅಡಿಕೆ ಬೆಳೆಗೆ ಬಾಧಿಸುವ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಸಹಾಯಧನ : ಅರ್ಜಿ ಆಹ್ವಾನ

0

ಅಡಿಕೆ ಬೆಳೆಗೆ ಬಾಧಿಸುವ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಬಳಸುವ ರೋಗ ನಾಶಕಗಳಾದ ಪ್ರೋಪಿಕೋನಜಾಲ್, ಟ್ಯುಬಿಕೊನಾಜಾಲ್, ಪ್ರೋಪಿನೆಬ್, ಕಾರ್ಬನ್ ಡೈಜಿಮ್ + ಮ್ಯಾಂಕೇಜೆಬ್, ಕಾಪರ್ ಸಲ್ಪೇಟ್ (ಮೈಲು ತುತ್ತು) ಖರೀದಿಗೆ ಶೇಕಡಾ ೩೦ ರಂತೆ ಪ್ರತೀ ಎಕರೆಗೆ ರೂ. 6೦೦ ಸಹಾಯಧನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ಲಭ್ಯವಿದೆ. ಪ್ರತಿ ರೈತರಿಗೆ 5 ಎಕರೆಗೆ ಗರಿಷ್ಟ 3೦೦೦ ಸಹಾಯಧನ ನೀಡಲಾಗುವುದು. ರೈತರು ಅರ್ಜಿಯೊಂದಿಗೆ ಅಧಿಕೃತ ಕೀಟನಾಶಕ ಮಾರಾಟ ಪರವಾನಿಗೆ ಇರುವ ಮಾರಾಟಗಾರರಿಂದ ಮೇಲಿನ ಸಸ್ಯ ಸಂರಕ್ಷಣಾ ಔಷಧಿ ಖರೀದಿಸಿ, ಜಿ.ಎಸ್.ಟಿ. ಬಿಲ್ಲು, ಪಹಣಿ ಪತ್ರ (ಖಖಿಅ) ಆರ್.ಟಿ.ಸಿ. ಜಂಟಿ ಖಾತೆ ಹೊಂದಿದ್ದಲ್ಲಿ, ಉಳಿಕೆದಾರರಿಂದ ಒಪ್ಪಿಗೆ / ಜಿ.ಪಿ.ಎ. ಪತ್ರ , ಆಧಾರ್ ಮತ್ತು ಬ್ಯಾಂಕ್ ಖಾತೆ, ಜಾತಿ ಪ್ರಮಾಣ ಪತ್ರ ವಿವರಗಳನ್ನು ದಿನಾಂಕ: 20-೦8-2025 ರೊಳಗೆ ತೋಟಗಾರಿಕೆ ಇಲಾಖೆಗೆ ಸಲ್ಲಿಸಲು ಕೋರಲಾಗಿದೆ.