ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ‘ಆಟಿ ವೈಶಿಷ್ಟ್ಯ’ ಕಾರ್ಯಕ್ರಮ

0

ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ‘ಆಟಿ ವೈಶಿಷ್ಟ್ಯ’ ಕಾರ್ಯಕ್ರಮ ನಡೆಯಿತು.
ಸರಕಾರಿ ಪದವಿ ಪೂರ್ವ ಕಾಲೇಜಿನ ಅಧ್ಯಾಪಕರು, ಜಾನಪದ ವಿದ್ವಾಂಸರು ಆಗಿರುವ ಡಾ. ಸುಂದರ ಕೇನಾಜೆ ರವರು ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿದರು. ಆಟಿ ಉತ್ಸವ ರೂಪದಲ್ಲಿ ಆಚರಣೆ ಮಾಡುವುದು ಸರಿಯಲ್ಲ ಯಾಕೆಂದರೆ ಆಟಿ ತಿಂಗಳು ಅಂದರೆ ಹಿಂದಿನ ಕಾಲದಲ್ಲಿ ಕಷ್ಟದ ಕಾಲ ಹಾಗಾಗಿ ಆಟಿಯ ತಿಂಗಳ ತಿನಿಸುಗಳನ್ನು ಉಪಯೋಗಿಸುವ ಹಿನ್ನೆಲೆಯನ್ನು ತಿಳಿಯುವುದು ಅವಶ್ಯಕವಾಗಿದೆ ಮತ್ತು ಇದು ಅಧ್ಯಯನದ ಮೂಲಕ ಈಗಿನ ಜನರಿಗೆ ಅರಿವಾಗ ಬೇಕೆಂದು ಹೇಳಿದರು.


ಕೆನರಾ ಕರಾವಳಿ ಇತರ ಪ್ರದೇಶಗಳಿಂದ ಭಿನ್ನವಾಗಿದ್ದು ಇಲ್ಲಿಯ ಆಚರಣೆಗಳು ಹಿಂದಿನ ಕಾಲದ ಕೃಷಿಗೆ ಪೂರಕವಾಗಿರುತ್ತದೆ ಮತ್ತು ಪ್ರಸ್ತುತ ಕೃಷಿಯಿಂದ ಜನರ ಜೀವನ ಪೂರ್ತಿಯಾಗಿ ಬದಲಾಗಿದ್ದು ಆಟಿ ಉತ್ಸವ ರೀತಿಯಲ್ಲಿ ನಡೆಸದೆ ಆಗಿನ ಕಾಲದ ಜನರ ಜೀವನವನ್ನು ಅರಿಯಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಯಾವುದೇ ವಿಷಯವನ್ನು ಇದು ತಪ್ಪು ಮತ್ತು ಸರಿಯೆಂದು ನಿರ್ಧರಿಸುವ ಅರಿವು ಬೆಳೆಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಗೌಡ ವಿದ್ಯಾಸಂಘದ ಅಧ್ಯಕ್ಷರಾದ ಧನಂಜಯ ಅಡ್ಪಾಂಗಾಯ ರವರು ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ದಯಾಮಣಿ .ಕೆ ಮತ್ತು ಮುಖ್ಯೋಪಾಧ್ಯಾಯಿನಿ ಯರಾದ ಶ್ರೀಮತಿ ಭಾರತಿ ಪಿ.ಯವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಂಘದ ಸಂಚಾಲಕರಾದ ಶ್ರೀಮತಿ ಸ್ವರ್ಣಕಲಾ ಎ.ಎಸ್. ರವರು ಕಾರ್ಯಕ್ರಮವನ್ನು ಸಂಘಟಿಸಿದರು. ವಿದ್ಯಾರ್ಥಿನಿಯರಾದ ತನುಜ್ಞಾ ಅತಿಥಿಗಳನ್ನು ಪರಿಚಯಿಸಿದರು. ಶ್ರೇಯಾ. ಆರ್ ಸರ್ವರನ್ನೂ ಸ್ವಾಗತಿಸಿ, ದುರ್ಗಾಶ್ರೀ ಧನ್ಯವಾದ ಸಮರ್ಪಿಸಿದರು. ಕುಮಾರಿ ಶ್ರೀವಲ್ಲಿ ಕಾರ್ಯಕ್ರಮ ನಿರೂಪಿಸಿದರು.


ಆಟಿ ವೈಶಿಷ್ಟ್ಯದ ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳು ವಿವಿಧ ಆಟಿ ತಿಂಗಳ ಖಾದ್ಯಗಳನ್ನು ಪ್ರದರ್ಶಿಸಿದರು. ನಂತರ ವಿದ್ಯಾರ್ಥಿಗಳಿಗೆ ಆಂಟಿ ತಿಂಗಳ ಖಾದ್ಯಗಳ ಮತ್ತು ತುಳುನಾಡಿನ ವಿವಿಧ ಸಾಂಸ್ಕೃತಿಕ ಕಲೆಗಳ ಸ್ಪರ್ಧೆಗಳು ನಡೆದವು.