ಸುಳ್ಯ ಅನ್ಸಾರ್ ಮುಸ್ಲಿಮೀನ್ ಅಸೋಸಿಯೇಷನ್ ವಾರ್ಷಿಕ ಮಹಾಸಭೆ

0

ಅನ್ಸಾರುಲ್ ಮುಸ್ಲೀಮೀನ್ ಅಸೋಸಿಯೇಷನ್ ಇದರ ವಾರ್ಷಿಕ ಮಹಾಸಭೆ ಅ.1 ರಂದು ಎಂ ಐ ಮದರಸ ಸಭಾಂಗಣದಲ್ಲಿ ನಡೆಯಿತು.
ಸಯ್ಯದ್ ಕುಂಞಿಕೋಯ ತಂಙಳ್ ಸಹದಿ ದುವಾಶಿರ್ವಚನ ಮೂಲಕ ಮಹಾಸಭೆ ಗೆ ಚಾಲನೆ ನೀಡಿದರು.
ಗಾಂಧಿನಗರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ಉದ್ಘಾಟಿಸಿದರು.
ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು.
ಗಾಂಧಿನಗರ ಜಮಾಯತ್ ಕಮಿಟಿ ಅಧ್ಯಕ್ಷ ಹಾಜಿ ಕೆ ಎಂ ಮಹಮ್ಮದ್ ಕೆಎಂಎಸ್,ಅನ್ಸಾರಿಯಾ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್ ಜನತಾ,ಸಲಹಾ ಸಮಿತಿ ಸದಸ್ಯರಾದ ಕೆಬಿ ಮಹಮ್ಮದ್ ಹಾಜಿ, ಹಾಜಿ ಐ ಇಸ್ಮಾಯಿಲ್ ಮೊದಲಾದವರು ಅತಿಥಿಗಳಾಗಿ ಉಪಸ್ಥಿತರಿದ್ದರು.


ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಸಂಶು ಕೆ ಬಿ ವಾಚಿಸಿದರು.
ಲೆಕ್ಕಪತ್ರ ವನ್ನು ಪ್ರಧಾನ ಕಾರ್ಯದರ್ಶಿ ಹನೀಪ್ ಬಿ ಎಂ ಮಂಡಿಸಿದರು.
ನಂತರ ಮುಂದಿನ ಯೋಜನೆಗಳ ಮಂಜೂರಾತಿ, ಅತಿಥಿಗಳ ಮಾತು, ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ನಂತರ ನೂತನ ಕಾರ್ಯಕಾರಿ ಸಮಿತಿಯ ರಚನೆ ಪ್ರಕ್ರಿಯೆ ನಡೆಯಿತು ಪ್ರಕ್ರಿಯೆಯಲ್ಲಿ ಕಳೆದ ಬಾರಿಯ ಕಾರ್ಯಕಾರಿ ಸಮಿತಿಯಯನ್ನು ಮುಂದುವರಿಸಲು ಮಹಾಸಭೆಯಲ್ಲಿ ತೀರ್ಮಾನಿಸಲಾಯಿತು.

ನಿರ್ದೇಶಕರಾಗಿ ಹಾಜಿ ಎಸ್ ಅಬ್ದುಲಾ ಕಟ್ಟೆಕ್ಕಾರ್, ಅಬ್ದುಲ್ ಖಾದರ್ ಹಾಜಿ ಪಾರೆ,ಎನ್ ಎ ಜುನೈದ್, ಹನೀಫ್ ಬಿ.ಎಂ ಜನತಾ, ಹಾಜಿ ಅಬ್ದುಲ್‌ ಹಮೀದ್ ಜನತಾ, ಬಶೀರ್ ಸಪ್ನಾ ಶಂಶುದ್ದೀನ್ ಕೆ.ಎಂ,ಶಾಫಿ ಕುತ್ತಮೊಟ್ಟೆ,
ಹಾಜಿ ಅಬ್ದುಲ್ ಶುಕೂರ್, ಆದಂ ಹಾಜಿ ಕಮ್ಮಾಡಿ,ಎಂ ಕೆ ಅಬ್ದುಲ್ ಲತೀಫ್, ಹಾಜಿ ಅಬ್ದುಲ್ ಗಫಾರ್,ಹಾಜಿ ಅಬ್ದುಲ್ ಖಾದರ್ ಸಿ.ಎ,ಹಾಜಿ ಯಾಕುಬ್ ಎಸ್ ಟಿ,ಲತೀಫ್ ಹರ್ಲಡ್ಕ,,ಎಸ್ ಪಿ ಅಬೂಭಕ್ಕರ್, ಅಬ್ದುಲ್ ರಝಾಕ್ ಕರಾವಳಿ, , ಶಾಹಿದ್ ಪಾರೆ,ಹನೀಫ್ ಬಿ.ಎಂ,ಹನೀಫ್ ಬುಶ್ರಾ,,ಅಬೂಭಕ್ಕರ್ ಕೆ.ಎ ಜಟ್ಟಿಪಳ್ಳ ಹಾಜಿ ಮುಸ್ತಫಾ ಕೆ.ಎಂ ಜನತಾ,ಇಬ್ರಾಹಿಂ ಕೆ ಬಿ,ಶರೀಫ್ ಜಟ್ಟಿಪಳ್ಳ,ನೌಶದ್ ಕೆರೆಮೂಲೆ,ಸಿದ್ದೀಕ್ ಕಟ್ಟೆಕ್ಕಾರ್ ರವರನ್ನು ಆಯ್ಕೆಮಾಡಲಾಯಿತು.


ಅನ್ಸಾರ್ ವ್ಯವಸ್ಥಾಪಕ ಮನೀರ್ ಸಹಾಯಕ ಸಿದ್ದೀಕ್ ಎಣ್ಮೂರ್ ಕಾರ್ಯಕ್ರಮ ನಿರೂಪಿಸಿದರು.
ಅನ್ಸಾರ್ ನಿರ್ದೇಶಕ ಶರೀಫ್ ಜಟ್ಟಿಪಳ್ಳ ವಂದನಾರ್ಪಣೆ ಮಾಡಿದರು.