ಆ.13-27: ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾ ಭವನದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ

0

ಔಷಧಿ ರಹಿತ ಚಿಕಿತ್ಸೆಯಿಂದ ಇಲ್ಲಿದೆ ಹಲವು ಖಾಯಿಲೆಗೆ ಪರಿಹಾರ

ಕಂಪನಿಯೋ ನೆಮ್ಮದಿ ವೆಲ್ ನೆಸ್ ಸೆಂಟರ್ ಪುತ್ತೂರು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ- ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಸಹಯೋಗದಲ್ಲಿ
ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರವು ಆ. 13 ರಿಂದ 27 ರ ತನಕ ನಡೆಯಲಿರುವುದು.

ಶಿಬಿರದಉದ್ಘಾಟನೆಯನ್ನು ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ ಯವರು ನೆರವೇರಿಸಲಿದ್ದಾರೆ.

ಪುತ್ತೂರು ನೆಮ್ಮದಿ ವೆಲ್ ನೆಸ್ ಸೆಂಟರ್ ಇದರ ಮಾಲಕರಾದ ಕೆ.ಪ್ರಭಾಕರ ಸಾಲ್ಯಾನ್ ಬಾಕಿಲಗುತ್ತು ಇವರು ಫೂಟ್ ಪಲ್ಸ್ ಥೆರಪಿಯ ಕುರಿತು ಮಾಹಿತಿ ನೀಡಲಿರುವರು.
ಅತಿಥಿಗಳಾಗಿ ಯುವಜನ ಸೇವಾ ಸಂಸ್ಥೆಯ ಅಧ್ಯಕ್ಷ ಲಯನ್ ದೀಪಕ್ ಕುತ್ತಮೊಟ್ಟೆ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ವಿಜಯಕುಮಾರ್ ಉಬರಡ್ಕ, ಕಾರ್ಯದರ್ಶಿ ನಮಿತಾ ಹರ್ಲಡ್ಕ
ಉಪಸ್ಥಿತರಿರುವರು. ಶಿಬಿರದಲ್ಲಿ ರಕ್ತ ಪರಿಚಲನೆ ಮತ್ತು ನರಗಳ ಸಮಸ್ಯೆಗಳನ್ನು ಔಷಧಿ ರಹಿತವಾಗಿ ಅಡ್ಡ ಪರಿಣಾಮವಿಲ್ಲದ 30 ನಿಮಿಷದ ಥೆರಪಿಯಿಂದ ನಿವಾರಿಸಬಲ್ಲುದು.
ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ದೇಶದಾದ್ಯಂತ 350 ಶಾಖೆಗಳನ್ನು ಹೊಂದಿದ್ದು 10 ಲಕ್ಷಕ್ಕಿಂತ ಹೆಚ್ಚು ಜನರು ಇದರಿಂದ ಪರಿಹಾರಕಂಡುಕೊಂಡಿದ್ದಾರೆ.ಮಧು ಮೇಹ, ಸಂಧಿ ವಾತ , ಸ್ನಾಯು ಸೆಳೆತ, ಪಾರ್ಕಿನ್ ಸನ್, ಸರ್ವಿಕಲ್ ಸ್ಪಾಂಡಿಲೈಟಿಸ್, ಥೈರಾಯಿಡ್, ಬೆನ್ನು ನೋವು, ಅಧಿಕ ರಕ್ತದೊತ್ತಡ, ವೆರಿಕೋಸ್ ವೇನ್, ಊತ, ಸಯಾಟಿಕಾ,‌ನಿದ್ರಾಹೀನತೆ,ಪಾರ್ಶ್ವ ವಾಯು, ಬೊಜ್ಜು ನಿವಾರಣೆ ಇನ್ನಿತರ ಕಾಯಲೆಗಳಿಗೆ ಫೂಟ್
ಪಲ್ಸ್ ಥೆರಪಿಯಿಂದ ಪರಿಹಾರ ಕಂಡುಕೊಳ್ಳಬಹುದು. ಯಾವುದೇ ಔಷಧವಿಲ್ಲದೆ ರಕ್ತ ಸಂಚಾರ ಮತ್ತು ನರ ಸಂಭಂಧಿತ ಕಾಯಿಲೆಗಳಿಗೆ ಉಚಿತ ವಾಗಿ ಥೆರಪಿ ನಡೆಸಲಾಗುವುದು. ಬೆಳಗ್ಗೆ ಗಂಟೆ 10.00 ರಿಂದ ಸಂಜೆ 4.00 ರ ತನಕ ಶಿಬಿರದ ಸದುಪಯೋಗ ಪಡೆದು ಕೊಳ್ಳುವಂತೆ ನೆಮ್ಮದಿ ವೆಲ್ ನೆಸ್ ಸೆಂಟರ್ ಮಾಲಕ ಪ್ರಭಾಕರ ಸಾಲ್ಯಾನ್ ರವರು ತಿಳಿಸಿದರು.