ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ, ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅರಂಬೂರು, ಶ್ರೀ ಮೂಕಾಂಬಿಕಾ ಭಜನಾ ಮಂದಿರ ಅರಂಬೂರು ಇದರ ಸಹಯೋಗದೊಂದಿಗೆ ಪುರೋಹಿತ ಅಭಿರಾಮ್ ಭಟ್ ಸರಳಿಕುಂಜರ ನೇತೃತ್ವದಲ್ಲಿ ಅರಂಬೂರು ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ 15ನೇ ವರ್ಷದ ವರಮಹಾಲಕ್ಷ್ಮಿ ಪೂಜೆಯು ಆ. 8 ರಂದು ನಡೆಯಿತು.















ಯೋಜನಾಧಿಕಾರಿ ಮಾಧವ ಗೌಡ ರವರು ದೀಪ ಬೆಳಗಿಸಿದರು.

ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ಅಧ್ಯಕ್ಷ ಸೋಮಶೇಖರ್ ಪೈಕ,
ಸುಳ್ಯ ವಲಯದ ಮೇಲ್ವಿಚಾರಕ ದಿನೇಶ್ ಶ್ರೀಮೂಕಾಂಬಿಕ ಭಜನಾ ಮಂದಿರದ ಗೌರವಾಧ್ಯಕ್ಷ
ಶ್ರೀಪತಿ ಭಟ್ ಮಜಿಗುಂಡಿ, ಮಂಜುನಾಥೇಶ್ವರ ಭಜನಾ ಪರಿಷತ್ತಿನ ಕಾರ್ಯದರ್ಶಿ ಸತೀಶ್ ಟಿ. ಎನ್, ಭಜನಾ ಮಂದಿರದ ಅಧ್ಯಕ್ಷ ಪರಮೇಶ್ವರ ಅರಂಬೂರು, ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಪರಿವಾರಕಾನ, ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಹಾಗೂ ಎರಡು ಒಕ್ಕೂಟದ ಪದಾಧಿಕಾರಿಗಳು, ಪೂಜಾ ಸಮಿತಿಯ ಅಧ್ಯಕ್ಷ ಉಷಾಮಜಿಗುಂಡಿ, ಗ್ರಾಮ ಪಂಚಾಯತ್ ಸದಸ್ಯರುಗಳು, ಪರಿವಾರಕಾನ ಒಕ್ಕೂಟದ ಸೇವಾ ಪ್ರತಿನಿಧಿ ಸುರೇಶ್ ಅರಂಬೂರು, ಒಕ್ಕೂಟದ ಸೇವಾ ಪ್ರತಿನಿಧಿ ವಿಜಯಶ್ರೀ, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸ್ಥಳೀಯ ಭಕ್ತಾದಿಗಳು ಭಾಗವಹಿಸಿದ್ದರು.

ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.










