ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘದಿಂದ ರಕ್ಷಾ ಬಂಧನ

0

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ ಬಿ.ಎಂ.ಎಸ್ ಸಂಯೋಜಿತ ಇದರ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮವು ಆ.9 ರಂದು ನಡೆಯಿತು. ಎಲ್ಲಾ ಜಾತಿ ಮತ ಬೇಧ ಮರೆತು ರಕ್ಷಾ ಬಂಧನದ ಸಂದೇಶ ಹಾಗೂ ಶುಭಾಶಯವನ್ನು ಅಂಚೆ ಮೂಲಕ ಕಳುಹಿಸುತ್ತಿರುವ ಪುರೋಹಿತ್ ನಾಗರಾಜ್ ಭಟ್ ಕಾರ್ಯಕ್ರಮದ ದೀಪ ಬೆಳಗಿಸಿ ರಕ್ಷಾಬಂಧನದ ಮಹತ್ವವನ್ನು ವಿವರಿಸಿದರು.

ಇವರನ್ನು ಶಾಲು ಹೊದಿಸಿ ಸಂಘದ ವತಿಯಿಂದ ಗೌರವಿಸಲಾಯಿತು. ಭಾರತೀಯ ಮಜ್ದೂರ್ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ ಮಾತನಾಡಿ ಶುಭಹಾರೈಸಿದರು. ಸಂಘದ ಅಧ್ಯಕ್ಷ ಪ್ರಕಾಶ್ ಎಂ‌.ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಂದರ್ಭದಲ್ಲಿ ಸಂಘದ ಕೋಶಾಧಿಕಾರಿ ರವಿ.ಎಸ್, ಉಪಾಧ್ಯಕ್ಷರಾದ ಪ್ರಶಾಂತ್ ಭಟ್, ಸಂಘಟನಾ ಕಾರ್ಯದರ್ಶಿ ಸುಂದರ ಪೆರಾಜೆ, ಜತೆ ಕಾರ್ಯದರ್ಶಿ ಸುರೇಂದ್ರ ಕಾಮತ್ ನಿರ್ದೇಶಕರಾದ ಲೋಕೇಶ್, ಭಾನುಪ್ರಕಾಶ್, ಧರಣೇಶ್. ಪ್ರದೀಪ್, ಪ್ರಸನ್ನ, ಜನಾರ್ದನ, ಗೋಪಾಲ ಜಾಲ್ಸೂರು, ರೋಹಿತ್, ಜಗದೀಶ್ ಎನ್.ಆರ್, ಕಾರ್ತಿಕ್, ಭಾಸ್ಕರ ವೇಣುಗೋಪಾಲ, ಚಾಮಯ್ಯ ಶಿವಾನಂದ,ಮಹೇಶ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.