10% ಡಿವಿಡೆಂಟ್ ಘೋಷಣೆ















ಸಂಧ್ಯಾರಶ್ಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕುರುಂಜಿಭಾಗ್ ಸುಳ್ಯ ಇದರ ವಾರ್ಷಿಕ ಮಹಾಸಭೆ ಆ. 9ರಂದು ಸಂಘದ ಸಂಧ್ಯಾರಶ್ಮಿ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಡಾ. ಎಸ್. ರಂಗಯ್ಯರ ಅಧ್ಯಕ್ಷತೆಯಲ್ಲಿ ನಡೆಯಿತು.
ನಿರ್ದೇಶಕರುಗಳಾದ ನಾಗಪ್ಪ ಗೌಡ ಬೊಮ್ಮೆಟ್ಟಿ ನೋಟೀಸ್ ಓದಿದರು. ಚೆನ್ನಕೇಶವ ಎಂ. ವರದಿ ಸಾಲಿನಲ್ಲಿ ಮೃತಪಟ್ಟ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಎಸ್. ಶಂಕರಪಾಟಾಳಿ ಗತವರ್ಷದ ನಡವಳಿ ವಾಚಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಜಯಂತಿ ಎಂ.ಆರ್ ವರದಿ ಮತ್ತು ಲೆಕ್ಕ ಪರಿಶೋಧನೆಯ ನ್ಯೂನತೆ ಮತ್ತು ಅನುಪಾಲನಾ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷ ವಿಶ್ವನಾಥ ನಾಯರ್ ಲೆಕ್ಕಪತ್ರ ಸಭೆಯ ಮುಂದಿಟ್ಟರು. ನಿರ್ದೇಶಕ ವಾಸುದೇವ ಮೊಗ್ರ ಉಪನಿಯಮಗಳ ತಿದ್ದುಪಡಿ ವಾಚಿಸಿದರು. 2025-25ನೇ ಸಾಲಿನಲ್ಲಿ ಬಜೆಟ್ ಗಿಂತ ಹೆಚ್ಚು ಖರ್ಚಾದ ವರದಿಯನ್ನು ನಿರ್ದೇಶಕರಾದ ಸುಬ್ರಹ್ಮಣ್ಯ ಹೊಳ್ಳ, ಮುಂಗಡ ಬಜೆಟ್ ನ್ನು ನಿರ್ದೇಶಕ ಸುಧಾಮ ಆಲೆಟ್ಟಿ ಸಭೆಯ ಮುಂದಿಟ್ಟರು. ಅಧ್ಯಕ್ಷಿಯ ಭಾಷಣ ಮಾಡಿದ ಸಂಘದ ಅಧ್ಯಕ್ಷ ಡಾ. ಎಸ್. ರಂಗಯ್ಯ ಮಾತನಾಡುತ್ತಾ ಸಂಘವು ವರದಿ ಸಾಲಿನಲ್ಲಿ ರೂ. 35.43 ಲಕ್ಷ ಪಾಲುಬಂಡವಾಳ, ರೂ. 2.27ಕೋಟಿ ಠೇವಣಿಯನ್ನು ಹೊಂದಿ ವರ್ಷಾಂತ್ಯದಲ್ಲಿ ರೂ. 8.23 ಲಕ್ಷ ಲಾಭಗಳಿಸಿದೆ. ಸದಸ್ಯರಿಗೆ ಶೇ. 10 ಡಿವಿಡೆಂಟ್ ನೀಡಲಾಗುವುದು. ಸಂಘವು ಮುಂದಿನ ದಿನಗಳಲ್ಲಿ ಈಶ್ವರಮಂಗಲದಲ್ಲಿ ನೂತನ ಶಾಖೆಯನ್ನು ತೆರೆಯುವ ಯೋಜನೆಯಿದ್ದು, ಅನುಮತಿಗಾಗಿ ಇಲಾಖೆಗೆ ಕಳುಹಿಸಲಾಗಿದೆ. ಸಂಘದ ಎಲ್ಲಾ ನಿರ್ದೇಶಕರ, ಸಿಬ್ಬಂದಿಗಳ ಮತ್ತು ಸದಸ್ಯರ ಸಹಕಾರದಿಂದ ಸದೃಢವಾಗಿದ್ದು, ಪ್ರಗತಿಯ ಹಾದಿಯಲ್ಲಿದೆ. ಸದಸ್ಯರಿಗೆ ಶೇ. 10 ಡಿವಿಡೆಂಟ್ ವಿತರಿಸಲಾಗುವುದು ಎಂದರು. ನಿರ್ದೇಶಕರಾದ ತುಕಾರಾಂ ಯೇನೆಕಲ್ಲು, ಹಿಮಕರ ಎಂ, ಬಾಲಸುಬ್ರಹ್ಮಣ್ಯ ಕೆ.ಎಸ್, ಶ್ರೀಮತಿ ಕಮಲಾಕ್ಷಿ ವಿ. ಶೆಟ್ಟಿ, ಸಿ.ಎ. ಕೇಶವ ಮತ್ತು ಶ್ರೀಧರ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ನಿರ್ದೇಶಕಿ, ಕೆ.ಎಫ್.ಡಿ.ಸಿ. ಉದ್ಯಾನವನ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಜು. 31ರಂದು ನಿವೃತ್ತಿ ಹೊಂದಿದ ಡಾ. ಸಾಯಿಗೀತ ಜ್ಞಾನೇಶ್ ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಡಾ. ಸಾಯಿಗೀತ ಜ್ಞಾನೇಶ್ ಪ್ರಾರ್ಥಿಸಿದರು. ಡಾ. ಎಸ್. ರಂಗಯ್ಯ ಸ್ವಾಗತಿಸಿ,
ಕೆ.ಆರ್. ಚಂದ್ರಹಾಸ ವಂದಿಸಿದರು. ನಿರ್ದೇಶಕ ಎ. ಅಬ್ದುಲ್ಲಾ ಕಾರ್ಯಕ್ರಮ ನಿರೂಪಿಸಿದರು.











