ಚೆಂಬು ಗ್ರಾಮದ ದಬ್ಬಡ್ಕದಲ್ಲಿ ಆ.6 ರಂದು ರಾತ್ರಿ ಆನೆ ದಾಳಿಯಿಂದ ರೈತರೊಬ್ಬರು ಮೃತಪಟ್ಟ ಬಳಿಕ ಆನೆ ಪತ್ತೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯವರು ತೀವ್ರಗೊಳಿಸಿದ್ದು, ನಾಳೆಯಿಂದ ಆನೆಯನ್ನು ಸೆತೆ ಹಿಡಿಯುವ ಕಾರ್ಯಾಚರಣೆ ಆರಂಭಗೊಳ್ಳುವ ಸಾಧ್ಯತೆ ಇದೆಯೆಂದು ತಿಳಿದುಬಂದಿದೆ.















ಆನೆ ಸೆರೆ ಹಿಡಿಯಲು ಬೇಕಾದ ಅನುಮತಿಯನ್ನು ಇಂದು ರಾಜ್ಯ ಸರ್ಕಾರವೇ ನೀಡಿದ್ದು ನಾಳೆ ಅಧಿಕೃತ ಪತ್ರ ಲಭಿಸಲಿದೆ ಎಂದು ಶಾಸಕರು ತಿಳಿಸಿದ್ದಾರೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಸೂರಜ್ ಹೊಸೂರು ಹಾಗೂ ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು ತಿಳಿಸಿದ್ದಾರೆ.
ಈ ಬಗ್ಗೆ ಡಿ.ಎಫ್.ಒ. ಆಭಿಷೇಕ್ ಅವರನ್ನು ಸುದ್ದಿ ಸಂಪರ್ಕಿಸಿ ವಿಚಾರಿಸಿದಾಗ ” ಆನೆ ಸೆರೆ ಹಿಡಿಯಲು ಅಧಿಕೃತ ಆದೇಶ ಪತ್ರ ಬಂದಿಲ್ಲ. ನಾಳೆ ದೊರೆಯುವ ನಿರೀಕ್ಷೆ ಇದೆ. ಅನುಮತಿಗಾಗಿ ಇಲಾಖೆಯಿಂದ ಪರಿಸರ ಇಲಾಖೆಗೆ ಶುಕ್ರವಾರವೇ ಬರೆಯಲಾಗಿದೆ ” ಎಂದು ತಿಳಿಸಿದ್ದಾರೆ.










