ಅದಿದ್ರಾವಿಡ ಸಮಾಜದ ಸಮಸ್ಯೆಗಳನ್ನು ಬಗೆಹರಿಸಲು ಶಾಸಕರಿಗೆ ಮನವಿ

ಕರ್ನಾಟಕ ರಾಜ್ಯ ಅದಿದ್ರಾವಿಡ ಸಮಾಜ ಸೇವಾ ಸಂಘ, ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ ಮಹಿಳಾ ಘಟಕ, ಕರ್ನಾಟಕ ರಾಜ್ಯ ಅದಿದ್ರಾವಿಡ ಯುವ ಸಮಾಜ ಸೇವಾ ಸಂಘ ಸುಳ್ಯ ತಾಲೂಕು ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಅ.10 ರಂದು ಜಾನಕಿ ವೆಂಕಟರಮಣ ಸಭಾಂಗಣದಲ್ಲಿ ನಡೆಯಿತು.
ಸುಳ್ಯ ವಿಧಾನಸಭಾಧ್ಯಕ್ಷ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮವನ್ನು
ಉದ್ಘಾಟನೆ ಮಾಡಿದರು.
















ಮಾಜಿ ಸಚಿವರಾದ ಎಸ್ ಅಂಗಾರ ಡಾ.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಹಾರರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಮಾಡಿದರು.
ಅದಿದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ದೊಡ್ಡೇರಿ ಸಭಾಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕ.ರಾ.ಆ.ಸ.ಸೇ.ಸಂಘ ರಾಜ್ಯಧ್ಯಕ್ಷರಾದ ಗಣೇಶ ಪ್ರಸಾದ್ ರವರು ಮುಖ್ಯ ಬಾಷಣಗಾರರಾಗಿ ಮಾತನಾಡಿ ನಮ್ಮ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವುತ್ತಿದ್ದೇವೆ ಅದರೆ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ವರೆಗೆ ಮಾತ್ರ ಮುಂದೆ ವಿದ್ಯಾರ್ಥಿಗಳು ಏನೂ ಮಾಡುತ್ತಾರೆ ಅವರ ಮುಂದಿನ ವಿದ್ಬ್ಯಾಸ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು ಉನ್ನತ ವ್ಯಾಸಂಗ ಮಾಡುವುದು ಪ್ರೇರಣೆ ನೀಡಿ ಅವರನ್ನು ಸಮಾಜದ ಮುಂಚೂಣಿಗೆ ತರಬೇಕು ಎಂದರು. ಕರ್ನಾಟಕ ಅರೆಬಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ,ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶರೀಫ್ ಜಟ್ಟಿಪಳ್ಳ,ಅದಿದ್ರಾವಿಡ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ಅರ್ಬಿಗುಡ್ಡೆ,ಸ್ಥಾಪಕಧ್ಯಕ್ಷ ಬಾಬೂ ಜಾಲ್ಸೂರು, ಗೌರವಧ್ಯಕ್ಷ ಮೋನಪ್ಪ ರಾಜರಾಂಪುರ,ರಾಜ್ಯ ಸಂಘಟನಾ ಕಾರ್ಯದರ್ಶಿ ವಿಜಯ ಆಲಡ್ಕ, ಅಜ್ಜಾವರ ಗ್ರಾ.ಪಂ ಅಧ್ಯಕ್ಷೆ ದೇವಕಿ,ತಾ.ಪಂ ಮಾಜಿಅಧ್ಯಕ್ಷ ಚನಿಯ ಕಲ್ತಡ್ಕ,ಅದಿದ್ರಾವಿಡ ಸಮಾಜ ಸೇವಾ ಸಂಘ ಮಹಿಳಾ ಘಟಕದ ಅಧ್ಯಕ್ಷೆ ಕುಸುಮಾ ಬಿಳಿಯಾರು,ಯುವ ಘಟಕದ ಅಧ್ಯಕ್ಷ ಸತೀಶ್ ಬೂಡುಮಕ್ಕಿ,ರಾಜ್ಯ ಗೌರವ ಸಲಹೆಗಾರರಾದ ರಾಮಚಂದ್ರ ಕೊಯಿಲ,ಗೌರವ ಸಲಹೆಗಾರರಾದ ರಾಘವ ಅಜ್ಜಾವರ, ಚೋಮ ನಾವೂರು,ದೀಲಿಪ್ ಕೊಡಿಯಾಲಬೈಲು, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚನಿಯ ಕಲ್ತಡ್ಕ ಸ್ವಾಗತಿಸಿ ಸೀತಾರಾಮ ಮೊರಂಗಲ್ಲುಶ್ರವಣ್ ಕೊಡಿಯಾಲಬೈಲು ಕಾರ್ಯಕ್ರಮ ನಿರೂಪಿಸಿದರು.

ರಕ್ತದಾನಿಗಳಿಗೆ ಸನ್ಮಾನ
ತುರ್ತು ಸಂದರ್ಭದಲ್ಲಿ ರಕ್ತ ಕಲ್ಪಿಸುವ ಹಾಗೂ ರಕ್ತದಾನಿಗಳಾದ ನವೀನ್ ಎಲಿಮಲೆ,ವಿಜಯ ಆಲಡ್ಕ,ನಿತಿನ್ ಮೇನಾಲ,ಶರತ್ ಪರಿವಾರ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ತಾಲೂಕು ವಿವಿಧ ಸಹಕಾರಿ ಸಂಘಗಳ ನಿರ್ದೇಶಕರುಗಳಾಗಿ ಆಯ್ಕೆಗೊಂಡ ಸಮುದಾಯದ ಸದಸ್ಯರಿಗೆ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಲಾಯಿತು.
ಶಾಸಕರಿಗೆ ಮನವಿ
ಕಾರ್ಯಕ್ರಮ ಉದ್ಘಾಟನೆ ಸಂದರ್ಭದಲ್ಲಿ ಅದಿದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ಶಾಸಕರಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ನೀಡಲಾಯಿತು.
ಮನವಿಯಲ್ಲಿ ಅದಿದ್ರಾವಿಡ ಸುಳ್ಯದಲ್ಲಿ 45,000 ಕ್ಕಿಂತ ಅಧಿಕ ಅದಿದ್ರಾವಿಡ ಸಮುದಾಯದ ಜನಸಂಖ್ಯೆ ಇರುವ ನಮ್ಮ ಸಮಾಜ ಬಾಂಧವರಿಗಾಗಿ ಸಮುದಾಯ ಭವನ ನಿರ್ಮಾಣ ಮಾಡಲು ನಿವೇಶನ ಓದಗಿಸಿ ಕೊಡಬೇಕೆಂದು, ಸುಳ್ಯ ತಾಲೂಕಿನ ಮಹಮ್ಮಾಯಿ ದೇವಸ್ಥಾನದ ಅಡಿಸ್ಥಳ ಪಹಣಿ ವಗೈರೆ ಮಾಡಿಸಿ ಕೊಡಬೇಕು,ಕೆಲವು ಕಡೆ ಅದಿದ್ರಾವಿಡ ಕುಟುಂಬಗಳ ಮನೆಗಳು ಟರ್ಪಾಲ್ ಹೊದಿಕೆಯಿಂದ ಕೂಡಿದೆ ಅದನ್ನು ಮುಕ್ತಿಗೊಳಿಸಬೇಕು,ಅದಿದ್ರಾವಿಡ ಸಮಾಜದ ಕೆಲವರಿಗೆ ಅದಾಯ ಪ್ರಮಾಣಪತ್ರ ಮಿತಿಯನ್ನು ಹೆಚ್ಚಿಸಿಕೊಡಬೇಕು,ಸಮುದಾಯ ಜನರು ವಾಸಿಸುವ ಕಾಲನಿಗಳಲ್ಲಿ ಪ್ರತ್ಯೇಕ ರುದ್ರಭೂಮಿ ಒದಗಿಸುವಂತೆ ಹಾಗೂ ಸಮುದಾಯ ಬಾಂಧವರ ಅಸ್ತಿ ಬಗ್ಗೆ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕೆಂದು ಈ ಸಂದರ್ಭದಲ್ಲಿ ಮನವಿ ಸಲ್ಲಿಸಲಾಯಿತು.










