ಸುದ್ದಿ ಸಮೂಹ ಸಂಸ್ಥೆ ಮತ್ತು ರಂಗಮಯೂರಿ ಕಲಾಶಾಲೆ ಸುಳ್ಯ ಇದರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆ. 10 ರಂದು ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ನಡೆದ ಮುದ್ದು ಕೃಷ್ಣ ವೇಷ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.

ಒಂದರಿಂದ ಮೂರು ವರ್ಷದೊಳಗಿನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಸುಳ್ಯ ಕೇರ್ಪಳದ ಭವಿತ್ಕುಮಾರ್ ಮತ್ತು ಜಯಮಣಿ ದಂಪತಿಯ ಪುತ್ರ ಮನಸ್ವಿನ್ ಹಾಗೂ ದ್ವಿತೀಯ ಬಹುಮಾನವನ್ನು ಅರಂತೋಡಿನ ನಯನ್ ಕಿರ್ಲಾಯ ಮತ್ತು ವತ್ಸಲಾ ದಂಪತಿಯ ಪುತ್ರಿ ಸಮನ್ವಿ ಕೆ.ಎ. ಪಡೆದಕೊಂಡಿದ್ದಾರೆ.















ಮೂರರಿಂದ ಆರು ವರ್ಷದೊಳಗಿನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಎಲಿಮಲೆಯ ದಿನೇಶ್ಕುಮಾರ್ ಮತ್ತು ಆಶಾ ದಂಪತಿಯ ಪುತ್ರ ಸಾನ್ವಿಕಾ ಎನ್.ಡಿ. ಮತ್ತು ದ್ವಿತೀಯ ಬಹುಮಾನವನ್ನು ಉಲ್ಲಾಸ್ ಪರ್ಲ ಮತ್ತು ಮಲ್ಲಿಕಾ ಎ.ಎಲ್. ದಂಪತಿಯ ಪುತ್ರ ಕಿಯಾಂಶ್ ಪಡೆದುಕೊಂಡಿದ್ದಾರೆ.
ಕೃಷ್ಣವೇಷ ಸ್ಪರ್ಧೆಯ ವೀಡಿಯೋ ಶ್ರೀಕೃಷ್ಣ ಜನ್ಮಾಷ್ಠಮಿಯಂದು ಸುದ್ದಿ ಚಾನೆಲ್ ನಲ್ಲಿ ಪ್ರಸಾರಗೊಳ್ಳಲಿದೆ.










