ಕೃಷಿಯಲ್ಲಿ ಅಧಿಕ ಇಳುವರಿ ಪಡೆಯುವ ಬಗ್ಗೆ ,ರೋಗ ಬಾಧೆ ತಡೆಗಟ್ಟುವ ಬಗ್ಗೆ ಮಾಹಿತಿ















ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಸುಳ್ಯ ರೈತ ಉತ್ಪಾದಕಕರ ಕಂಪೆನಿ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ಅಡಿಕೆ ಮತ್ತು ಕಾಳುಮೆಣಸಿನ ಬಗ್ಗೆ ಮಾಹಿತಿ ಕಾರ್ಯಾಗಾರವು ಆ.11 ರಂದು ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಸಭಾಭವನದಲ್ಲಿ ನಡೆಯಿತು.
ಪ್ರಗತಿಪರ ಕೃಷಿಕ ರಾಮ ಭಟ್ ಬದಂತಡ್ಕ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಸಂಘದ ಉಪಾಧ್ಯಕ್ಷ ಮಹೇಶ್ ಜಬಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದೋರ್ ಶ್ರೀ ಸಿದ್ಧಿ ಎಗ್ರಿ ಕಂ ಪ್ರೈವೇಟ್ ಲಿಮಿಟೆಡ್ ನ ಪೆರುವೋಡಿ ನಾರಾಯಣ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಸುಳ್ಯ ರೈತ ಉತ್ಪಾದಕ ಸಂಘದ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಮುಖ್ಯ ಅತಿಥಿಗಳಾಗಿದ್ದು ರೈತ ಉತ್ಪಾದಕ ಕಂಪೆನಿಯಿಂದ ರೈತರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಪ್ರಗತಿಪರ ಕೃಷಿಕರಾದ ಸ್ವರ್ಣ ಶ್ರೀ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಸತ್ಯನಾಯಣ ಅಚ್ರಪ್ಪಾಡಿ,ವೆಂಕಪ್ಪ ಗೌಡ ಜೆ.ಟಿ, ಜಗದೀಶ ಆಳ್ವ, ನವೀನ ಚಾತುಬಾಯಿ, ಮಹೇಶ್ ಹುಲಿಮನೆ,ಹೊನ್ನಪ್ಪ ಉದ್ದಂಪಾಡಿ,ಹರೀಶ ಪಾಪುನಡ್ಕ ರವರು ಉಪಸ್ಥಿತರಿದ್ದರು.

ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್ ಎಂ.ಎಚ್ .
ಸ್ವಾಗತಿಸಿ,ಬಾಲಚಂದ್ರ ಪಲ್ಲತ್ತಡ್ಕ ಪ್ರಾರ್ಥಿಸಿ, ಅಜಿತ್ ನಿಡುಬೆ ಕಾರ್ಯಕ್ರಮ ನಿರೂಪಿಸಿದರು.
ಸಂಘದ ನಿರ್ದೇಶಕರು ಹಾಗೂ ನೂರಾರು ಜನ ಸದಸ್ಯರು ಮಾಹಿತಿ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.










