















ಅಜ್ಜಾವರ ಗ್ರಾಮದ ಮೇನಾಲ ಶ್ರೀ ಕೃಷ್ಣ ಭಜನಾ ಮಂದಿರ, ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ಮೇನಾಲ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳು ಆ -10ರಂದು ಮೇನಾಲ ಭಜನಾ ಮಂದಿರದ ಬಳಿಯ ಮೈದಾನದಲ್ಲಿ ನಡೆಯಿತು. ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿ ಶ್ರೀ ಕೃಷ್ಣನ ಆದರ್ಶ ಗಳನ್ನು ಮೈಗೂಡಿಸಿಕೊಳ್ಳುವಂತೆ ಕರೆನೀಡಿದರು.

ಸಭೆಯ ಅಧ್ಯಕ್ಷತೆ ಯನ್ನು ಶ್ರೀ ಕೃಷ್ಣ ಭಜನಾ ಮಂದಿರ ಮೇನಾಲ ಇದರ ಅಧ್ಯಕ್ಷರಾದ ಬಾಲಕೃಷ್ಣ ಪಿ ಎಸ್ ವಹಿಸಿದ್ದರು. ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷರಾದ ಶ್ರೀಕಾಂತ್ ಗೋಲ್ವಳ್ಕರ್, ಸುಳ್ಯ ಸಿ ಎ ಬ್ಯಾಂಕ್ ಅಧ್ಯಕ್ಷರಾದ ವಿಕ್ರಂ ಅಡಪಂಗಾಯ, ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಯ ಅಧ್ಯಕ್ಷರಾದ ಸುಧಾಕರ್ ಪಲ್ಲತಡ್ಕ, ಕೋಶಾಧಿಕಾರಿ ಶಶ್ಮಿ ಭಟ್, ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಬೇಬಿ ಸುಕುಮಾರ್, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ವಾಲಿಬಾಲ್ ಸ್ಪರ್ಧೆಯಲ್ಲಿ ಪಚ್ಚನಾಡಿ ಪ್ರೆಂಡ್ಸ್ ಪ್ರಥಮ ಸ್ಥಾನ ಪಡೆಯಿತು. ಪ್ರೆಂಡ್ಸ್ ಮನಿಯಾ ಕೂಡುರಸ್ತೆ ತಂಡ ದ್ವಿತೀಯ ಸ್ಥಾನ ಪಡೆಯಿತು. ಥ್ರೋಬಾಲ್ ನಲ್ಲಿ ನಾಗಶ್ರೀ ಪ್ರೆಂಡ್ಸ್ ಸುಳ್ಯ ತಂಡ ಪ್ರಥಮ ಸ್ಥಾನಿಯಾಯಿತು. ದ್ವಿತೀಯ ಸ್ಥಾನವನ್ನು ಸೆವೆನ್ ಸ್ಟಾರ್ ತಂಡ ಸುಳ್ಯ ತಂಡ ಪಡೆದುಕೊಂಡಿತು. ಕಾರ್ಯಕ್ರಮದಲ್ಲಿ ಬಾಲಕೃಷ್ಣ ಪಿ ಎಸ್ ಸ್ವಾಗತಿಸಿ ಪ್ರಭೋದ್ ಶೆಟ್ಟಿ ವಂದಿಸಿದರು. ಸುಭೋದ್ ಶೆಟ್ಟಿ ಮೇನಾಲ ಕಾರ್ಯಕ್ರಮ ನಿರೂಪಿಸಿದರು.











