ಊಟ ಮಾಡುವಾಗ ಬಿಕ್ಕಳಿಸಿದರೆ ಮನೆಯ ಹಿರಿಯರು ಮೇಲೆ ನೋಡು ನೀರು ಕುಡಿ ಎಂದು ಹೇಳುವುದನ್ನು ನಾವೆಲ್ಲರೂ ಕೇಳಿದ್ದೇವೆ, ಹಾಗೆಯೇ ?ಬೇರೆ ಯಾರೋ ನಿನ್ನನ್ನು ನೆನಪುಮಾಡುತ್ತಿದ್ದಾರೆ? ಎಂದೂ ಹೇಳುವುದುಂಟು. ಬಿಕ್ಕಳಿಕೆ ಎಲ್ಲರಿಗೂ ಒಂದಲ್ಲ ಒಂದು ಬಾರಿ ಅನುಭವವಾಗಿರುತ್ತದೆ. ಈ ಬಿಕ್ಕಳಿಕೆ ಕೆಲವು ಕ್ಷಣಗಳಿಂದ ಹಿಡಿದು ಕೆಲವು ನಿಮಿಷಗಳವರೆಗೂ ಇರುವುದುಂಟು. ಅಪರೂಪಕ್ಕೆ ದಿನಗಟ್ಟಲೆ ಮುಂದುವರೆದು ಕಾಡುವುದೂ ಉಂಟು.
ಬಿಕ್ಕಳಿಕೆ ಶ್ವಾಸಕೋಶದ ಕೆಳಗಿರುವ ವಪೆಯ (ಜiಚಿಠಿhಡಿಚಿgm) ಚಲನೆಯಲ್ಲಿ ಏರುಪೇರಾದಾಗ ಉಂಟಾಗುತ್ತದೆ. ಮುಖ್ಯವಾಗಿ ವಪೆಯಲ್ಲಿರುವ ?ಫ್ರೆನಿಕ್? ಎಂಬ ನರ ಉದ್ರೇಗಕ್ಕೊಳಗಾದಾಗ ವಪೆಯ ಚಲನೆ ಹೆಚ್ಚಾಗಿ ಬಿಕ್ಕಳಿಕೆ ಶುರುವಾಗುತ್ತದೆ.
ಬಿಕ್ಕಳಿಕೆಯ ಸಾಮಾನ್ಯ ಕಾರಣಗಳು:
ಸಾಮಾನ್ಯವಾಗಿ ಬಿಕ್ಕಳಿಕೆಯು, ಅವಶ್ಯಕತೆಗಿಂತ ಹೆಚ್ಚು ಊಟ ಮಾಡಿದ ನಂತರ, ಆತುರದಲ್ಲಿ ಊಟ ಮಾಡಿದಾಗ, ಊಟ ಮಾಡುವುದರೊಟ್ಟಿಗೆ ಅತಿಯಾಗಿ ಮಾತನಾಡುವುದು, ಅತಿ ತಣ್ಣಗಿನ ಅಥವಾ ಅತಿ ಬಿಸಿಯಾದ ಆಹಾರ ಸೇವಿಸಿದಾಗ, ಅತಿಯಾದ ಮದ್ಯಪಾನ ಮಾಡಿದಾಗ, ಜೋರಾಗಿ ನಕ್ಕಾಗ ಹೆಚ್ಚಾಗಿ ಬರುತ್ತದೆ. ಕೆಲವು ಜನ ಆತಂಕಕ್ಕೊಳಗಾದಾಗಲೂ ಬಿಕ್ಕಳಿಸುವುದುಂಟು.
ಅಪರೂಪದ ಕಾರಣಗಳು:
ಮೆದುಳಿನ ತೊಂದರೆ, ಶ್ವಾಸಕೋಶ, ಮೇದೋಜೀರಕ ಗ್ರಂಥಿ, ಯಕೃತ್, ಮೂತ್ರಕೋಶದ ಸೋಂಕಿನಿಂದಲೂ ಬಿಕ್ಕಳಿಕೆ ಉಂಟಾಗುತ್ತದೆ. ಕೆಲವೊಬ್ಬರಲ್ಲಿ ಶಸ್ತ್ರಚಿಕಿತ್ಸೆಯ ನಂತರವೂ ಬಿಕ್ಕಳಿಕೆ ಕಾಣಿಸಿಕೊಳ್ಳಬಹುದು.















ಕೆಲವೊಮ್ಮೆ ಆಹಾರ ಪದಾರ್ಥ ಗಂಟಲಿನಲ್ಲಿರುವ ಅನ್ನನಾಳದಲ್ಲಿ ಸಿಕ್ಕಿ ಕೊಂಡಾಗ ಬಿಕ್ಕಳಿಸುವುದರಿಂದ ಹೊರಬರುತ್ತವೆ.
ಪರಿಹಾರ:
ಬಹಳಷ್ಟು ಬಾರಿ ನಮ್ಮ ಗಮನವನ್ನು ಬೇರೆಡೆಗೆ ಸರಿಸಿದಾಗ ಬಿಕ್ಕಳಿಕೆ ತಾನಾಗಿಯೇ ನಿಲ್ಲುತ್ತದೆ. ಕೆಲವೊಮ್ಮೆ ೭ ರಿಂದ ೧೦ ಸೆಕೆಂಡುಗಳ ಕಾಲ ಉಸಿರು ಬಿಗಿ ಹಿಡಿದರೆ ಬಿಕ್ಕಳಿಕೆ ನಿಲ್ಲುತ್ತದೆ.
ಗರ್ಭಿಣಿ ಸ್ತ್ರೀಯರಿಗೆ ಸ್ಕ್ಯಾನಿಂಗ್ ಪರೀಕ್ಷೆ ಮಾಡುವಾಗ ಕೆಲವೊಮ್ಮೆ ಹೊಟ್ಟೆಯಲ್ಲಿರುವ ಮಗು ಬಿಕ್ಕಳಿಸುವುದು ಕಂಡುಬರುತ್ತದೆ. ತಜ್ಞ ವೈದ್ಯರ ಪ್ರಕಾರ ಮಗುವಿನ ಈ ವರ್ತನೆ ಮುಂದೆ ಹುಟ್ಟಿದ ನಂತರ ಉಸಿರಾಡಲು ನಡೆಸುವ ತಾಲಿಮು.
ಹೋಮಿಯೋಪತಿ ಚಿಕಿತ್ಸಾ ವಿಧಾನ :
ಹೋಮಿಯೋಪತಿ ಸಿದ್ಧಾಂತದ ಪ್ರಕಾರ ಮನುಷ್ಯ ಎಂದರೆ ದೇಹ ಮತ್ತು ಮನಸ್ಸುಗಳ ಸಮ್ಮೇಳನ.
ಮನುಷ್ಯ= ದೇಹ+ ಮನಸ್ಸು.
ವ್ಯಕ್ತಿ ಅನಾರೋಗ್ಯಕ್ಕೆ ಈಡಾಗಬೇಕಿದ್ದರೆ ಅದಕ್ಕೆ ಮುಖ್ಯ ಕಾರಣ ಆತನ ರೋಗನಿರೋಧಕ ಶಕ್ತಿ ಕಡಿಮೆಯಾಗುವುದು. ಹೋಮಿಯೋಪಥಿ ವೈದ್ಯಕೀಯ ಪದ್ಧತಿಯು ಈ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹವು ತಾನಾಗಿಯೇ ರೋಗಾಣುಗಳ ವಿರುದ್ಧ ಹೋರಾಡುವಂತೆ ಮತ್ತು ಅವುಗಳನ್ನು ದೇಹದಿಂದ ಹೊರಹಾಕುವಂತೆ ಮಾಡುತ್ತದೆ.
ಬಿಕ್ಕಳಿಕೆ ದಿನಗಟ್ಟಲೆ ಇದ್ದಾಗ ಆ ವ್ಯಕ್ತಿಯ ಎದೆ ಗೂಡಿನ ಎಕ್ಸರೇ, ಹೊಟ್ಟೆಯ ಸ್ಕ್ಯಾನಿಂಗ್, ರಕ್ತ ಪರೀಕ್ಷೆಯ ಮೂಲಕ ಬಿಕ್ಕಳಿಕೆ ಕಾರಣವನ್ನು ತಿಳಿಯಲಾಗುತ್ತದೆ. ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ವ್ಯಕ್ತಿತ್ವಕ್ಕೆ ಸಂಬಂಧಪಟ್ಟ ವಿವರಗಳನ್ನು ಕಲೆ ಹಾಕಿ ಆತನಿಗೆ ಹೊಂದುವ ಹೋಮಿಯೋಪಥಿ ಔಷಧಿಯನ್ನು ನೀಡಿ ತೊಂದರೆಯನ್ನು ಗುಣಪಡಿಸಲಾಗುತ್ತದೆ.
ಡಾ. ವರ್ಷಿಣಿ ಶೆಣೈ,
ವಿಜಯ ಹೋಮಿಯೋ ಕ್ಲಿನಿಕ್, ಪುತ್ತೂರು ಮತ್ತು ಬೆಳ್ಳಾರೆ










