ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಖೋ ಖೋ ತೀರ್ಪುಗಾರರ ಪರೀಕ್ಷೆಯಲ್ಲಿ ಪುತ್ತೂರು ಸಾಂದೀಪನಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್ ಎ.ಯು. ಉತ್ತೀರ್ಣರಾಗಿದ್ದಾರೆ.















ಚಿಕ್ಕಬಳ್ಳಾಪುರದಲ್ಲಿ ನಡೆದ ವಾಲಿಬಾಲ್ ತೀರ್ಪುಗಾರರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಳೆದ 12 ವರ್ಷದ ರೋಟರಿ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದರು.
ಮಂಜುನಾಥ್ ರವರು ಕಬಡ್ಡಿ, ಅಥ್ಲೆಟಿಕ್, ಲಗೋರಿ ಸ್ಪರ್ದೆಯ ರಾಜ್ಯ ಮತ್ತು ರಾಷ್ಟ್ರ ಮಟ್ಟದ ತೀರ್ಪುಗಾರರಾಗಿದ್ದಾರೆ.
ಇವರು ಪಡ್ಪಿನಂಗಡಿಯ ಉಮೇಶ್ ನಾಯಕ್ ಹಾಗೂ ಪ್ರೇಮ ದಂಪತಿಗಳ ಪುತ್ರ.










