ಅಯ್ಯನಕಟ್ಟೆ ಶಾಲೆಗೆ ಒಡಿಯೂರು ಸಹಕಾರಿ ಸಂಘದಿಂದ ರೂ. 25 ಸಾವಿರ ಅನುದಾನ

0

ಶ್ರೀ ಗುರುದೇವ ದತ್ತ ಸಂಸ್ಥಾನಂ ಒಡಿಯೂರು ಇಲ್ಲಿಯ ಒಡಿಯೂರು ಶ್ರೀ ವಿವಿದೊದ್ದೇಶ ಸೌಹಾರ್ದ ಸಹಕಾರಿ ಸಂಘದಿಂದ ಆಯ್ಯನಕಟ್ಟೆ ಸ.ಉ.ಹಿ.ಪ್ರಾ. ಶಾಲೆಗೆ ರೂ. 25ಸಾವಿರ ಧನಸಹಾಯವನ್ನು ಆ. 11ರಂದು ವಿತರಿಸಲಾಯಿತು.

ಅನುದಾನದ ಚೆಕ್ಕನ್ನು ಬೆಳ್ಳಾರೆ ವಲಯದ ಅಧ್ಯಕ್ಷ ದೇವಿ ಪ್ರಸಾದ್,ಕೊಡಿಯಾಲ ಘಟಕಾಧ್ಯಕ್ಷ ಸಚಿನ್, ಕೊಡಿಯಾಲ ಅಧ್ಯಕ್ಷೆ ಶಿಭಾ ಎಸ್. ರೈ ಕೊಡಿಯಾಲ, ಸೇವಾ ಅಧ್ಯಕ್ಷೆ ಲಾವಣ್ಯ, ತಾಲೂಕು ಅಧ್ಯಕ್ಷ ಸುಹಾಸ್ ಅಲೆಕ್ಕಾಡಿಯವರು ಶಾಲಾ ಶಿಕ್ಷಕಿ ಸೌಮ್ಯ ಎಸ್.ಬಿ ಮತ್ತು ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ ಕೆ ಮಣಿಮಜಲು ಇವರಿಗೆ ಹಸ್ತಾಂತರಿಸಿದರು.