ದುಗ್ಗಲಡ್ಕ ಅಂಗನವಾಡಿ ಕೇಂದ್ರದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ರಚನೆ

0


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಸುಳ್ಯ ವಲಯದಿಂದ ಆಗಮಿಸಿದ ವಲಯ ಮೇಲ್ವಿಚಾರಕಿಯವರ ಸಮ್ಮುಖದಲ್ಲಿ ನೂತನ ಹಿರಿಯ ವಿದ್ಯಾರ್ಥಿ ಸಂಘದ ರಚನಾ ಸಭೆಯನ್ನು ದುಗ್ಗಲಡ್ಕ ಅಂಗನವಾಡಿ ಕೇಂದ್ರದಲ್ಲಿ ಆ. ೧೦ ರಂದು ನಡೆಸಲಾಯಿತು. ಸುದ್ದಿ ವರದಿಗಾರರಾದ ಕೆ.ಟಿ. ಭಾಗಿಶ್‌ರವರು ದೀಪ ಬೆಳಗಿಸಿ ಸಂಘ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ದುಗ್ಗಲಡ್ಕ ಯುವಕ ಮಂಡಲದ ಅಧ್ಯಕ್ಷರಾದ ತೀರ್ಥರಾಮಗೌಡ ಕೊಯಿಕುಳಿ ಇವರು ಅಧ್ಯಕ್ಷತೆಯನ್ನು ವಹಿಸಿ ನೂತನ ಸಂಘಕ್ಕೆ ಶುಭ ಹಾರೈಸಿದರು.


ಸುಳ್ಯ ವಲಯ ಮೇಲ್ವಿಚಾರಕಿಯವರಾದ ಶ್ರೀಮತಿ ವಿಜಯ ಜೆ ಡಿ ಇವರು ಹಿರಿಯ ವಿದ್ಯಾರ್ಥಿ ಸಂಘದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನೂತನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶ್ರೀಮತಿ ಸಕಲ ದುಗಲಡ್ಕ, ಕಾರ್ಯದರ್ಶಿಯಾಗಿ ಯತಿನ್ ಗೌಡ ಕೊಯಿಕುಳಿ, ಉಪಾಧ್ಯಕ್ಷರಾಗಿ ತೀರ್ಥರಾಮಗೌಡ ಕೊಯಿಕುಳಿ, ಕೋಶಾಧಿಕಾರಿಯಾಗಿ ಚಿದಾನಂದ ಕೊಯಿಕುಳಿ, ಕ್ರೀಡಾ ಕಾರ್ಯದರ್ಶಿಯಾಗಿ ಚೇತನ್ ಕಲ್ಮಡ್ಕ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜಯರಾಮ ಡಿ ಕಲಾಪ್ರಿಯ ಆಯ್ಕೆಯಾದರು.
ಚಿಂತನ್ ಕುಂಬೆತ್ತಿಬನ, ಜಯಂತ ಕೊಯಿಕುಳಿ, ರಂಜಿತ್ ಕಲ್ಮಡ್ಕ, ಸಂದೀಪ್ ರೈ ದುಗ್ಗಲಡ್ಕ, ಸುಬ್ರಹ್ಮಣ್ಯ ಕುಂಬೆತ್ತಿಬನ, ವಿನಾಯಕ ದುಗ್ಗಲಡ್ಕ, ಮಂಜುಳ ಮೂಡೆಕಲ್ಲು, ರಕ್ಷಿತಾ ಕಲ್ಮಡ್ಕ, ಅಕ್ಷಯ್ ಮೂಡೆಕಲ್ಲು, ವಾರಿಜ ದುಗ್ಗಲಡ್ಕ ಸದಸ್ಯರುಗಳಾಗಿ ಆಯ್ಕೆಯಾದರು. ಗೌರವ ಸಲಹೆಗಾರರಾಗಿ ಕೆ.ಟಿ. ಭಾಗೀಶ, ಶ್ರೀಮತಿ ಶಶಿಕಲಾ ಎ. ನೀರಬಿದಿರೆ ನ. ಪಂ. ಅಧ್ಯಕ್ಷರು ಸುಳ್ಯ, ಇವರನ್ನು ಆಯ್ಕೆ ಮಾಡಲಾಯಿತು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಚಿತ್ರಾ ಪ್ರಶಾಂತ್ ಸ್ವಾಗತಿಸಿದರು. ಅಂಗನವಾಡಿ ಸಹಾಯಕಿ ಶ್ರೀಮತಿ ಶಾರದ ಸಹಕರಿಸಿದರು.