ಗೂನಡ್ಕ – ಬೈಲೆ ” ನಮ್ಮೂರ ಮಿತ್ರ ಬಳಗ ” ಆಶ್ರಯದಲ್ಲಿ ಕೆಸರ್‌ಡ್‌ ಒಂಜಿ ದಿನ -ಆಟಿ ಕ್ರೀಡಾ ಕೂಟ

0

ಸಮಾರೋಪ ಸಮಾರಂಭ – ಸನ್ಮಾನ – ಗೌಜಿ ಗಮ್ಮತ್ತು

ಸಂಪಾಜೆ ಗೂನಡ್ಕ ಬೈಲೆ ” ನಮ್ಮೂರ ಮಿತ್ರ ಬಳಗ” ಆಶ್ರಯದಲ್ಲಿ ಕೆಸರ್‌ಡ್‌ ಒಂಜಿ ದಿನ -ಆಟಿ ಕ್ರೀಡಾ ಕೂಟ ಕಾರ್ಯಕ್ರಮವು ಬೈಲೆ ಉಳ್ಳಾಕುಲು ಚಾವಡಿ ( ಕುಯಿಂತೋಡು ನಾಗೇಶ್ ಗೌಡರ ಗದ್ದೆ ಯಲ್ಲಿ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮವು ಜುಲೈ 10 ರಂದು ನಡೆಯಿತು.

ಬೈಲೆ ಗೂನಡ್ಕ ಕೆಸರ್‌ಡ್‌ ಒಂಜಿ ದಿನದ ಸಮಾರೋಪದ ಅಧ್ಯಕ್ಷತೆಯನ್ನು ನಮ್ಮೂರ ಮಿತ್ರ ಬಳಗದ ಗೌರವಾಧ್ಯಕ್ಷ ಸೋಮಶೇಖರ ಕೊಯಿಂಗಾಜೆ ವಹಿಸಿದರು. ಇದೇ ವೇಳೆ ಕುಯಿoತೋಡು ಗದ್ದೆಯ ಮಾಲಿಕ ನಾಗೇಶ್ ಗೌಡ ಕುಯಿoತೋಡು ಅವರ ಪತ್ನಿ ರಮ್ಯ ನಾಗೇಶ್
ಅವರನ್ನು ಗೌರವಿಸಲಾಯಿತು. ಬಳಿಕ ಕ್ರೀಡಾ ಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯಪಾಧ್ಯಾಯರು ಹಾಗೂ ಕೆಸರ್‌ಡ್‌ ಒಂಜಿ ದಿನ ಆಟಿ ಕೂಟದ ಗೌರವ ಸಲಹೆಗಾರರು ದಾಮೋದರ ಮಾಸ್ತರ್ , ಅಧ್ಯಕ್ಷರು ಜಗದೀಶ್ ಪಿ.ಎಲ್ , ಉಪಾಧ್ಯಕ್ಷರಾದ ಗಣೇಶ್ ಕಾಪಿಲ , ವಿಜಯಾನಂದ ಇರ್ಣೆ , ಮೋಹನ್ ಕುಮಾರ್ ಪಿ.ಯು, ಗೌರವ ಸಲಹೆ ಗಾರ ಕೆ. ಪಿ ಪ್ರಕಾಶ್ ಕುಯಿoತೋಡು , ರಾಮಚಂದ್ರ ಕಲ್ಲುಗದ್ದೆ , ಧನಜಂಯ ಅಬೀರ , ಕೀರ್ತನ್ ಕಡೆಪಾಲ , ದೀಪಕ್ ಪೇರಡ್ಕ , ಉಲ್ಲಾಸ್ ಮಾವಜಿ , ಗುರು ಪ್ರಸಾದ್ ಬೈಲೆ , ಪ್ರಧಾನ ಕಾರ್ಯದರ್ಶಿ , ಕೆ. ಜಿ ನವೀನ್ ಇರ್ಣೆ , ಜೊತೆ ಕಾರ್ಯದರ್ಶಿ ಜಿ. ಆರ್ ರಂಜನ್ ಕಲ್ಲುಗದ್ದೆ , ಕೋಶಾಧಿಕಾರಿ ಸನ್ನತ್ ಪಿ. ಎನ್ ಪೆಲ್ತಡ್ಕ , ಸಮಿತಿಯ ಸದಸ್ಯರಾದ ಚಂದ್ರ ಶೇಖರ ಸಂಕೇಶ , ರಾಘವ ಅಬಿರ , ಚಂದ್ರ ಕುಮಾರ್ ಕೆ.ಆರ್ , ವಿಜಯ ಕುಮಾರ್ ಕುಯಿo ತೋಡು , ಆನಂದ ಅಬೀರ , ಹಿರಿಯರು ನಿವೃತ್ತ ಸೈನಿಕರಾದ ಕೆ.ಪಿ ಜಗದೀಶ್ , ಕ್ರೀಡಾ ಕೂಟದ ನಿರ್ಣಾಯಕರಾಗಿ ಸುಳ್ಯ ಕೊಡಿಯಾಲ ಬೈಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಸತೀಶ್ ಕೊಯಿಂಗಾಜೆ , ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಜಯ ಪ್ರಕಾಶ್ ಕುಡೆಕಲ್ಲು , ಗ್ರಾಮಸ್ಥರು , ಊರ ಪರವೂರಿನವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಪ್ರಕಾಶ್ ಮುಳ್ಯ ನಿರೂಪಿಸಿದರು.

ಆಟಿ ಗಮ್ಮತ್ತು :
ಬೆಳಿಗ್ಗೆ ಆಗಮಿಸಿದ ಎಲ್ಲಾ ಗ್ರಾಮಸ್ಥರಿಗೆ ಪತ್ರೊಡೆ ಚಾ ವಿತರಣೆ , ಮಧ್ಯಾಹ್ನ ಊಟ , ಆಟಿ ಸ್ಪೆಷಲ್ , ಆಟಿ ಪಾಯಸ , ಸಂಜೆ ನೀರುಳ್ಳಿ ಬಜೆ , ಪತ್ರೊಡೆ ಆಟಿ ಖಾದ್ಯ ವಿಶೇಷವಾಗಿತ್ತು.

ಗ್ರಾಮಸ್ಥರಿಗೆ ಕ್ರೀಡಾ ಕೂಟ :

ಗ್ರಾಮಸ್ಥರಿಗೆ ವಿಶೇಷವಾಗಿ ವಿವಿಧ ಕ್ರೀಡಾಕೂಟಗಳಾದ
ಹಗ್ಗ ಜಗ್ಗಾಟ , ತ್ರೋ ಬಾಲ್ , ವಾಲಿ ಬಾಲ್ , ಪಿರಮಿಡ್ , ದಾಜ್ ಬಾಲ್ , ನಿಧಿ ಶೋಧ , ನೇಗಿಲು ಓಟ , ಹಲಗೆ ಓಟ , ರಿಲೇ ಓಟ , ಗೂಟ ಓಟ , ಹಿಂಬದಿ ಓಟ , ನಿಂಬೆ ಚಮಚ ಓಟ , (ಮಕ್ಕಳಿಗೆ , ಪುರುಷರಿಗೆ , ಮಹಿಳೆಯರಿಗೆ 100 ಓಟ) ಸಾರ್ವಜನಿಕ ಹಗ್ಗ ಜಗ್ಗಾಟ , ಅಂಬುಕಾಯಿ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು.
ಸಾರ್ವಜನಿಕ ಮುಕ್ತ ಹಗ್ಗ ಜಗ್ಗಾಟದಲ್ಲಿ ಪುರುಷರ ವಿಭಾಗದಲ್ಲಿ ಪ್ರಥಮ ಸ್ವಾಮಿ ಕೊರಗಜ್ಜ ಎ , ದ್ವಿತೀಯ ಸ್ವಾಮಿ ಕೊರಗಜ್ಜ ಬಿ. ಮಹಿಳೆಯರ ವಿಭಾಗದಲ್ಲಿ ಪ್ರಥಮ ಆದರ್ಶ ಪ್ರೆಂಡ್ಸ್ ಚಡಾವು , ದ್ವಿತೀಯ ಮಿತ್ರ ಬಳಗ ಗೂನಡ್ಕ ಪಡೆದು ಕೊಂಡಿತು. ಹಾಗೂ ಓವರ್ ಆಲ್ ಚಾಂಪಿಯನ್ ಶಿಪ್ ನ್ನು ಬೈಲೆ ಬುಲ್ಡೋರ್ಸಸ್ ಗೂನಡ್ಕ ಪಡೆದುಕೊಂಡಿತು.