ಆಲೆಟ್ಟಿ : ಹಾವು ಕಡಿದು ಮಹಿಳೆ ಮೃತ್ಯು

0

ಆಲೆಟ್ಟಿ ಗ್ರಾಮದ ಕುಡೆಂಬಿಯಲ್ಲಿ ಮಹಿಳೆಯೊಬ್ಬರಿಗೆ ವಿಷದ ಹಾವೊಂದು ಕಡಿದು ಮೃತಪಟ್ಟ ಘಟನೆ ವರದಿಯಾಗಿದೆ.

ಕುಡೆಂಬಿ ಕುತ್ತಿಮುಂಡ ಶಾಂತಪ್ಪ ಎಂಬವರ ಪತ್ನಿ ರಾಧಮ್ಮ ಮೃತಪಟ್ಟ ಮಹಿಳೆ. ರಾಧಾಮ್ಮರನ್ನು ಸುಳ್ಯಕೆ.ವಿ.ಜಿ
ಆಸ್ಪತ್ರೆಗೆ ಕರೆತರಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟರೆಂದು ತಿಳಿದು ಬಂದಿದೆ.

ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಾವು ಕಡಿಯಿತೆಂದು ಹೇಳಲಾಗಿದೆ.