ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಕೊಲ್ಲುಮೊಗ್ರದ ಕೆವಿಜಿ ಪ್ರೌಢಶಾಲಾ 60 ವಿದ್ಯಾರ್ಥಿ ಗಳಿಗೆ ಉಚಿತವಾಗಿ ಯೂನಿಫಾರಂ ಆ.8 ರಂದು ವಿತರಿಸಲಾಯಿತು.















ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಜಯಪ್ರಕಾಶ್ ವಹಿಸಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಸುರೇಶ್ , ರೋಟರಿ ಕ್ಲಬ್ ನ ರವಿ ಕಕ್ಷೆಪದವು, ಗೋಪಾಲ ಎಣ್ಣೆಮಜಲು, ಇನ್ನರ್ ವೀಲ್ ಅಧ್ಯಕ್ಷೆ ವಿಮಲಾ ರಂಗಯ್ಯ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕಮಲಾಕ್ಷ ಮುಳ್ಳುಬಾಗಿಲು, ಎಸ್.ಡಿ.ಎಂ.ಸಿ ಅಧ್ಯಕ್ಷ ಬೊಳಿಯಪ್ಪ ಪೈಕ ಮಕ್ಕಳ ಪೋಷಕರು,ಸುಬ್ರಹ್ಮಣ್ಯ ರೋಟರಿ ಸದಸ್ಯರು, ಇನ್ನರ್ ವೀಲ್ ಕ್ಲಬ್ಬಿನ ಸದಸ್ಯರು, ಸೀನಿಯರ್ ಚೇಂಬರ್ ಸದಸ್ಯರುಗಳು ಹಾಜರಿದ್ದರು.










