ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಸುಳ್ಯ ಬೆಳ್ಳಾರೆ ಮತ್ತು ಮುರುಳ್ಯ ವಲಯದ ಘಟ ಸಮಿತಿ ಪದಾಧಿಕಾರಿಗಳ ಸಭೆ ಆ.10 ರಂದು ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನಾ ಕಚೇರಿ ಬೆಳ್ಳಾರೆ ಇಲ್ಲಿ ವಿಕಾಸ ವಾಹಿನಿ ಸ್ವಸಹಾಯ ಸಂಘಗಳ ಬೆಳ್ಳಾರೆ ಮತ್ತು ಮರುಲ್ಯವಲಯದ ಘಟಸಮಿತಿ ಪದಾಧಿಕಾರಿಗಳ ಸಭೆಯನ್ನು ನಡೆಸಲಾಯಿತು.
ವೇದಿಕೆಯಲ್ಲಿ ಸುಳ್ಯ ತಾಲೂಕು ಘಟ ಸಮಿತಿಯ ಅಧ್ಯಕ್ಷರಾದ ಸುಹಾಸ್ ಅಲೆಕ್ಕಾಡಿ, ಸುಳ್ಯ ತಾಲೂಕು ಮೇಲ್ವಿಚಾರಕರಾದ ಶ್ರೀಮತಿ ಗೀತಾ ನೆಟ್ಟಾರು, ಬೆಳ್ಳಾರೆ ವಲಯ ಅಧ್ಯಕ್ಷರಾದ ದೇವಿಪ್ರಸಾದ್ ಐವರ್ನಾಡು, ಬೆಳ್ಳಾರೆ ಘಟ ಸಮಿತಿ ಅಧ್ಯಕ್ಷರಾದ ಲೋಕೇಶ್ ಚಾವಡಿಬಾಗಿಲು ಉಪಸ್ಥಿತರಿದ್ದರು ವೇದಿಕೆಯಲ್ಲಿದ್ದ ಗಣ್ಯರು ಮಾತನಾಡುತ್ತಾ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು.















ಈ ಸಂದರ್ಭದಲ್ಲಿ ಅಯ್ಯನಕಟ್ಟೆ ಶಾಲೆಗೆ ಬಯಲು ರಂಗ ಮಂದಿರಕ್ಕಾಗಿ ಗ್ರಾಮೋತ್ಸವದ ಪ್ರಯುಕ್ತ ಮಂಜೂರಾಗಿದ್ದ ಸಹಾಯಧನವನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಭಾಸ್ಕರ ರವರಿಗೆ ಹಸ್ತಾಂತರಿಸಲಾಯಿತು ಹಾಗೂ ಯೋಜನಾ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾರ್ಥಿ ಪ್ರೋತ್ಸಾಹ ಧನವಾಗಿ ಹೇಮಲತಾ ಮತ್ತು ಪ್ರೇಮ ರವರಿಗೆ ನೀಡಲಾಯಿತು.
ಮುರುಳ್ಯ ವಲಯದ ಸಂಯೋಜಕರಾದ ಶ್ರೀಮತಿ ವಿಜಯ ದೋಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಬೆಳ್ಳಾರೆ ಸೇವಾ ದೀಕ್ಷಿತ ಸವಿತಾ ಸ್ವಾಗತಿಸಿ, ಮುರುಳ್ಯ ಸೇವಾ ದೀಕ್ಷಿತೆ ಪ್ರೇಮ ವಂದಿಸಿದರು.










