ಅ. 17: ಅಲೆಟ್ಟಿಯಲ್ಲಿ ಮೊಸರು ಕುಡಿಕೆ ಉತ್ಸವ

0

ಅಟ್ಟಿ ಮಡಕೆ ಒಡೆಯುವ ಸಾಹಸಮಯ ಶೋಭಾ ಯಾತ್ರೆ ಹಾಗೂ ಧಾರ್ಮಿಕ ಸಭೆ

ಅಲೆಟ್ಟಿ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ 3ನೇ ವರ್ಷದ ಅಲೆಟ್ಟಿ ಮೊಸರು ಕುಡಿಕೆ ಉತ್ಸವ ಹಾಗೂ ಯುವಕರಿಂದ ಅಟ್ಟಿ ಮಡಕೆ ಒಡೆಯುವ ಶೋಭಾಯಾತ್ರೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಅ. 17 ರಂದು ನಡೆಯಲಿರುವುದು.

ಅಪರಾಹ್ನ ಗಂಟೆ 2.00ರಿಂದ ನಾಗಪಟ್ಟಣ ಸದಾಶಿವ ದೇವಸ್ಥಾನ ಬಳಿಯಿಂದ ಮೊಸರುಕುಡಿಕೆ ಉತ್ಸವದ ಅಟ್ಟಿ ಮಡಕೆ ಒಡೆಯುವ ಶೋಭಾಯಾತ್ರೆಗೆ ನಾಗಪಟ್ಟಣ ಸದಾಶಿವ ದೇವಸ್ಥಾನ ವ್ಯ. ಸ. ಅಧ್ಯಕ್ಷ ದಿನೇಶ್ ಕೊಲ್ಚಾರು ರವರು ಚಾಲನೆ ನೀಡಲಿರುವರು.


ಶೋಭಾ ಯಾತ್ರೆಯು ನಾಗಪಟ್ಟಣ ಶಾಲೆ ಬಳಿ, ಮಿತ್ತಡ್ಕ ರೋಟರಿ ಶಾಲೆ, ಮೊರಂಗಲ್ಲು ಧೂಮಾವತಿ ದೈವಸ್ಥಾನ ದ್ವಾರದ ಬಳಿ, ನಾರ್ಕೋಡು ದ್ವಾರದ ಬಳಿ, ಕುಡೆಕಲ್ಲು ಮಹಮ್ಮಾಯಿ ದೇವಸ್ಥಾನ ಬಳಿ, ವಯನಾಟ್ ದೈವಸ್ಥಾನ ಎದುರು, ಅಲೆಟ್ಟಿ ಜಂಕ್ಷನ್, ಅಲೆಟ್ಟಿ ದೇವಸ್ಥಾನ ಎದುರಿನಲ್ಲಿ ನಡೆಯಲಿದೆ.


ಸಂಜೆ ಗಂಟೆ 6.30ರಿಂದ ಧಾರ್ಮಿಕ ಸಭೆಯು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರೈ ಅಲೆಟ್ಟಿ ಯವರ ಅಧ್ಯಕ್ಷ ತೆಯಲ್ಲಿ ನಡೆಯಲಿದೆ.
ಖ್ಯಾತ ವಾಗ್ಮಿ ನವೀನ್ ಸುಬ್ರಹ್ಮಣ್ಯ ರವರು ದಿಕ್ಸುಚಿ ಭಾಷಣ ಮಾಡಲಿರುವರು. ದೇವಸ್ಥಾನದ ಮೊಕ್ತೇಸರ ಹೇಮಚಂದ್ರ ಬೈಪಡಿತ್ತಾಯ ದೀಪ ಪ್ರಜ್ವಸಲಿರುವರು.
ಅಟ್ಟಿ ಮಡಕೆ ಒಡೆಯುವ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಥಮ ರೂ. 10,000/- ಮತ್ತು ಶಾಶ್ವತ ಫಲಕ, ದ್ವಿತೀಯ ರೂ. 6,000/-ಮತ್ತು ಶಾಶ್ವತ ಫಲಕ, ತೃತೀಯ ರೂ. 4,000/-ಮತ್ತು ಶಾಶ್ವತ ಫಲಕ ನೀಡ ಲಾಗುವುದು ಎಂದು ಸಮಿತಿ ಅಧ್ಯಕ್ಷ ರಾಧಾಕೃಷ್ಣ ರೈ ತಿಳಿಸಿದರು.