ಐವರ್ನಾಡು ಸಮಗ್ರ ಸಂಜೀವಿನಿ ಒಕ್ಕೂಟದ ಮಹಾಸಭೆ ಮತ್ತು ಆಟಿಕೂಟ

0

ಒಕ್ಕೂಟದ ಸದಸ್ಯೆಯರಿಂದ ವೈವಿಧ್ಯಮಯ ಆಟಿ ಖಾದ್ಯಗಳು

ಐವರ್ನಾಡು ಸಮಗ್ರ ಸಂಜೀವಿನಿ ಒಕ್ಕೂಟದ ಮಹಾಸಭೆ ಹಾಗೂ ಆಟಿ ಕೂಟ ಕಾರ್ಯಕ್ರಮ ಆ.13 ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಭಾರತಿ ಗುತ್ತಿಗಾರ್ ಮೂಲೆ ಇವರು ವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ದೀಪ ಪ್ರಜ್ವಲಿಸಿ , ತೆಂಗಿನ ಪಿಂಗಾರವನ್ನು ಅರಳಿಸುವ ಮುಖಾಂತರ ಆಟಿಕೂಟಕ್ಕೆ ಚಾಲನೆಯನ್ನು ನೀಡಿದರು.


ಅಮಿತಾ, ಹರ್ಷಿತಾ, ಮಮತಾ,ರೇಖಾ ಪ್ರಾರ್ಥಿಸಿದರು.
ಆಟಿ ಕೂಟದ ಮಾಹಿತಿಯನ್ನು ಶ್ರೀಮತಿ ಉದಯ ಗೌರಿ ಅವರು ನೀಡಿದರು. ವರದಿಯನ್ನು ಎಲ್‌ ಸಿ.ಆರ್ .ಪಿ ಮಮತಾ ನೀಡಿದರು. ಲೆಕ್ಕಪರಿಶೋಧನಾ ವರದಿಯನ್ನು ಎಂಬಿಕೆಯವರು ಮಂಡಿಸಿದರು.


ಸನ್ಮಾನ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಲಿಖಿತ್ ಶಾಂತಿ ಮೂಲೆ, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಅವಿನ್ ಕಟ್ಟತ್ತಾರು, ಕ್ರೀಡಾ ತರಬೇತಿಯನ್ನು ನೀಡುತ್ತಿರುವ ವೀರನಾಥನ್ ಸಿ.ಕೂಪ್, ನಿವೃತ್ತಿ ಗೊಂಡ ಆಶಾ ಕಾರ್ಯಕರ್ತೆಯಾದ ಸುಂದರಿ ಪಿ.ಕೆ ಮತ್ತು ಲೀಲಾವತಿ ಆರಿಕಲ್ಲು ಹಾಗೂ ತಾಲೂಕು ಪಂಚಾಯತಿಯಿಂದ ಆಗಮಿಸಿದ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ವೇತ, ವಲಯ ಮೇಲ್ವಿಚಾರಕರಾದ ಮಹೇಶ್ ಹಾಗೂ ಬಿ ಆರ್ ಪಿ ಪಿ ಆರ್ ಐ ಆಗಿರುವ ಜಯಲಕ್ಷ್ಮಿ ಇವರುಗಳನ್ನು ಸನ್ಮಾನಿಸಲಾಯಿತು.


ನಂತರ ಒಕ್ಕೂಟದ ಪುನರಚನೆಯನ್ನು ವಲಯ ಮೇಲ್ವಿಚಾರದ ಮಹೇಶ್ ಅವರು ನೆರವೇರಿಸಿದರು.
ನೂತನವಾಗಿ ಒಕ್ಕೂಟದ ಅಧ್ಯಕ್ಷರಾಗಿ ಸಾವಿತ್ರಿ ದೊಡ್ಡಮನೆ ಹಾಗೂ ಕಾರ್ಯದರ್ಶಿಯಾಗಿ ಸೀತಾ ಲಕ್ಷ್ಮಿ ನಿಡುಬೆ, ಖಜಾಂಜಿಯಾಗಿ ಜ್ಯೋತಿ ಮಿತ್ತಮೂಲೆ, ಉಪಾಧ್ಯಕ್ಷರಾಗಿ ಪುಷ್ಪಲತಾ ಬಿರ್ಮುಕಜೆ, ಜತೆ ಕಾರ್ಯದರ್ಶಿಯಾಗಿ ಪಂಚವರ್ಣ ಜಬಳೆ ಇವರುಗಳನ್ನು ಪದಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು.
ಸದಸ್ಯರಾಗಿ ಹರಿಣಾಕ್ಷಿ ಚೆಮ್ನೂರು, ಮೋಹಿನಿ ದೇರಾಜೆ, ಭಾರತಿ ಗುತ್ತಿಗಾರಮೂಲೆ, ಕೀರ್ತನ ನಿಡು ಬೆ, ಹರ್ಷಿತಾ ನಿಡುಬೆ, ಶೋಭಾ ಲಾವಂತಡ್ಕ , ರೇವತಿ ಬೋಳುಗುಡ್ಡೆ, ಪ್ರೀತಿಕಾ ದೇರಾಜೆ ,ಚೇತನಾ ಮಡ್ತಿಲ, ಶ್ವೇತಾ ದೊಡ್ಡ ಮನೆ ಇವರುಗಳನ್ನು ಆಯ್ಕೆ ಮಾಡಲಾಯಿತು.
ನಂತರ ತಾಲೂಕು ಪಂಚಾಯಿತಿ ಸಿಬ್ಬಂದಿಗಳು ಸರಕಾರದ ಯೋಜನೆ ಬಗ್ಗೆ ಮಾಹಿತಿಯನ್ನು ನೀಡಿದರು.


ನಂತರ ಆಟಿ ತಿಂಗಳಲ್ಲಿ ತಯಾರಿಸಿದ ಖಾದ್ಯಗಳ ರುಚಿ ಸವಿದು ಅತಿಥಿಗಳು ಅಂಕಗಳನ್ನು ಹಾಕುವ ಮೂಲಕ ಬಹುಮಾನವನ್ನು ನೀಡಿದರು.
ಖಾದ್ಯ ತಯಾರಿಸಿ ತಂದ ಪ್ರತಿ ಸದಸ್ಯರಿಗೂ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಯಿತು.


ಈ ಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾಲೂಕ್ ಪಂಚಾಯತ್ ಎನ್ ಆರ್ ಎಲ್ ಎಂ ಸಿಬ್ಬಂದಿಗಳು ಹಾಗೆ ಗ್ರಾಮ ಪಂಚಾಯತ್ ಎನ್ ಆರ್ ಎಲ್ ಎಂ ಸಿಬ್ಬಂದಿಗಳು ಗ್ರಾಮ ಪಂಚಾಯತ್ ಸದಸ್ಯೆ ಸುಜಾತಾ ಪವಿತ್ರ ಮಜಲು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಸಂಜೀವಿನಿ ಸಂಘದ ಅಧ್ಯಕ್ಷ, ಕಾರ್ಯದರ್ಶಿ, ಸದಸ್ಯರು ಹಾಗೆ ಸ್ತ್ರೀ ಶಕ್ತಿ ಸಂಘದ ಸದಸ್ಯರು ಭಾಗವಹಿಸಿದ್ದರು.


ಕೃಷಿ ಸಖಿ ಎಲ್ಲರನ್ನು ಸ್ವಾಗತಿಸಿದರು. ಜ್ಯೋತಿ ಮಿತ್ತಮೂಲೆ ವಂದಿಸಿದರು. ಎಂ ಬಿ ಕೆ ಕಾರ್ಯಕ್ರಮವನ್ನು ನಿರೂಪಿಸಿದರು.