















ಬೆಳ್ಳಾರೆ ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಹರ್ ಘರ್,ಸ್ವಚ್ಛತಾ ಕಾರ್ಯಕ್ರಮ, ನಡೆಯಿತು.
ಬೆಳ್ಳಾರೆ ಕೆಳಗಿನ ಪೇಟೆಯಿಂದ ಪ್ರಾರಂಭಗೊಂಡು ಮೇಲೆ ಪೇಟೆಯ ತನಕ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿದರು, ಈ ಸಂದರ್ಭದಲ್ಲಿ ಗ್ರಾಮ ಅಧ್ಯಕ್ಷರು ನಮಿತಾ ಎಲ್.ರೈ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಅವರು ಪೇಟೆಯ ಬಿಲ್ಡಿಂಗ್ ಗಳ ಮುಂಭಾಗವನ್ನು ವೀಕ್ಷಿಸಿದರು, ಬೆಳ್ಳಾರೆ ಮೇಲಿನ ಪೇಟೆಯಲ್ಲಿ ಹೂವಿನ ಅಂಗಡಿಯ ಪಕ್ಕದಲ್ಲಿ ಕಸದ ರಾಶಿಯನ್ನು ತಕ್ಷಣ ಸ್ವಚ್ಛತೆಗೊಳಿಸಬೇಕೆಂದು ಸಂಬಂಧಪಟ್ಟವರಿಗೆ ತಿಳಿಸಿದರು. ಪದೇ ಪದೇ ಬೆಳ್ಳಾರೆ ಪೇಟೆಯಲ್ಲಿ ಕಸ ರಾಶಿ ಹಾಕುತ್ತಿದ್ದು ಸ್ಥಳ ಪರಿಶೀಲನೆ ಮಾಡಿ ಸಂತೆ ಮಾರುಕಟ್ಟೆಯಲ್ಲಿ ಮಾತ್ರ, ತರಕಾರಿಗಳನ್ನು ವ್ಯಾಪಾರ ಮಾಡಬೇಕೆಂದು ಹೇಳಿದರು,

ಈ ಸಂದರ್ಭದಲ್ಲಿ ಅಕ್ಷಯ ಯುವಕ ಮಂಡಲ ನೆಟ್ಟಾರು, ಬೆಳ್ಳಾರೆ ಲಕ್ಷ್ಮಿ ಸಂಜೀವಿನಿ ಸಂಘದ ಸದಸ್ಯರು, ಬೆಳ್ಳಾರೆ ಸ್ನೇಹಶ್ರೀ ಮಹಿಳಾ ಮಂಡಲದ ಅಧ್ಯಕ್ಷರು ,ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಇತರ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.










