ಸುಬ್ರಹ್ಮಣ್ಯ : ಶ್ರೀಕೃಷ್ಣಾ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಭಕ್ತಿ ಗೀತೆ ಬಿಡುಗಡೆ

0

ಶ್ರೀಕೃಷ್ಣ ಜನ್ಮಾಷ್ಟಮಿಯ ವಿಶೇಷವಾಗಿ ತುಳು ನಾಡ ಗಾನ ಗಂಧರ್ವ ಗಾಯಕ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗದಿಂದ ಹಾಡಿರುವ ಭಕ್ತಿಗೀತೆಯನ್ನು
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿರವರು
ಬಿಡುಗಡೆಗೊಳಿಸಿದರು.

ಹಾಡಿನ ನಿರ್ಮಾಣವನ್ನು ಕಲಾ ಪೋಷಕರಾದ ನವೀನ್ ಮಾವಜಿ, ಶ್ರೀಮತಿ ಕಾವ್ಯಶ್ರೀ ನವೀನ್ ಮಾವಜಿ, ಮತ್ತು ಬೇಬಿ ಸಾನ್ವಿ ಮಾವಜಿ ನೆರವೇರಿಸಿದ್ದರು.
ಸಹ ಗಾಯಕಿಯರಾಗಿ ಜನ್ಯ ಪ್ರಸಾದ್ ಅನಂತಾಡಿ, ಉಜ್ವಲ ಆಚಾರ್ ಮಂಕುಡೆ ಹಾಗೂ ಸಾಹಿತ್ಯ ಆಚಾರ್ಯ ಪುತ್ತೂರು, ಚಿತ್ರೀಕರಣ ಹಾಗು ಸಂಕಲನ ಶ್ರೀ ಟಾಕೀಸ್ ಪ್ರಸಾದ್ ಮಾಡಿದ್ದಾರೆ.

ಬಿಡುಗಡೆ ಸಮಾರಂಭದಲ್ಲಿ
ದೇವಳದ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಎಸ್ ಜೆ ಏಸುರಾಜ್, ದೇವಳದ ಅಭಿಯಂತರರು ಉದಯ್ ಕುಮಾರ್ ಕೆ ಸಿ,
ವ್ಯವಸ್ಥಾಪನ ಸಮಿತಿ ಸದಸ್ಯರುಗಳಾದ ಸೌಮ್ಯ ಭರತ್ ಮತ್ತು ಲೀಲಾ ಮನಮೋಹನ್,
ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಲೋಲಾಕ್ಷ ಕೈಕಂಬ
ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು
ದೇವಳದ ಸಿಬ್ಬಂದಿಗಳಾದ ಮಹೇಶ್ ಕುಮಾರ್ ಎಸ್ ಮತ್ತು ಯೋಗೀಶ್ ಎಂ. ಮೊದಲಾದವರಿದ್ದರು.