ಜೋಡುಪಾಲದಲ್ಲಿ ಮತ್ತೆ ಕುಸಿದ ಬರೆಯ ಮಣ್ಣು

0

ದ್ವಿಚಕ್ರ ಸವಾರ ಅಪಾಯದಿಂದ ಪಾರು

ಮಾಣಿ ಮೈಸೂರು ಹೆದ್ದಾರಿ ಜೋಡುಪಾಲ ಬಳಿ ಆ 14 ರಂದು ರಾತ್ರಿ ಸುಮಾರು 9.30 ರವೇಳೆ ಮತ್ತೆ ಮಣ್ಣು ಕುಸಿತ ಉಂಟಾಗಿದ್ದು ಈ ಭಾಗದಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ಸವಾರ ಅಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.


ದ್ವಿಚಕ್ರ ಸವಾರ ಈ ರಸ್ತೆಯಲ್ಲಿ ಬರುತ್ತಿದ್ದ ಸಂದರ್ಭ ಏಕಾಏಕಿ ಮೇಲಿನಿಂದ ಮಣ್ಣು ಕುಸಿತ ಉಂಟಾಗಿದ್ದು ಅದರ ಜೊತೆಯಲ್ಲಿ ಸಣ್ಣ ಮರವೊಂದು ಕೂಡ ರಸ್ತೆಗೆ ಬಂದು ಬಿದ್ದಿದೆ.

ಈ ಸ್ಥಳದಲ್ಲಿ ಬೆಳಿಗ್ಗೆಯೂ ಕೂಡ ಮಣ್ಣು ಕುಸಿತ ಉಂಟಾಗಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತೆರಳಿದ್ದರು.
ಇದೀಗ ಸ್ಥಳೀಯರು ಸ್ಥಳದಲ್ಲಿ ನಿಂತು ವಾಹನ ಸವಾರರಿಗೆ ಎಚ್ಚರಿಕೆಯ ಸಂದೇಶವನ್ನು ನೀಡುತ್ತಿದ್ದಾರೆ ಎನ್ನಲಾಗಿದೆ.