ಸ.ಹಿ.ಪ್ರಾ.ಶಾಲೆ ಪೆರುವಾಜೆಯಲ್ಲಿ ನ್ಯಾಷನಲ್ ಡೇ ಆಚರಣೆ ನಡೆಯಿತು.

ಮಕ್ಕಳಲ್ಲಿ ತಮ್ಮ ದೇಶದ ಬಗ್ಗೆ ಪ್ರೀತಿ , ದೇಶದ ವೈವಿಧ್ಯತೆಯ ಬಗ್ಗೆ ಹಾಗೂ ಬೇರೆ ಬೇರೆ ರಾಜ್ಯಗಳ ಉಡುಗೆ ತೊಡುಗೆ, ಆಹಾರ ಪದ್ದತಿ, ಸಂಪ್ರದಾಯಗಳ ಬಗ್ಗೆ ಗೌರವ ಬೆಳೆಸುವ ಉದ್ದೇಶದಿಂದ ನ್ಯಾಷನಲ್ ಡೇ ಆಚರಿಸಲಾಯಿತು.















ವಿದ್ಯಾರ್ಥಿಗಳು ಬೇರೆ ಬೇರೆ ರಾಜ್ಯಗಳ ಉಡುಗೆ ತೊಟ್ಟು ಆ ರಾಜ್ಯದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಬಿ.ಎಸ್.ಎನ್.ಎಲ್ ಅಧಿಕಾರಿ ರಾಮ ಪೆರುವಾಜೆ ಇವರು ಉಪಸ್ಥಿತರಿದ್ದು, ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಇಂತಹ ಕಾರ್ಯಕ್ರಮಗಳು ಶಾಲೆಯಲ್ಲಿ ಹೆಚ್ಚು ಹೆಚ್ಚು ಜರಗಬೇಕು, ಇದರಿಂದ ವಿದ್ಯಾರ್ಥಿಗಳು ಕಲಿಯುವುದು ಬಹಳಷ್ಟಿದೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಜೊತೆಗೆ ರಜೆಯ ಸಮಯದಲ್ಲಿ ನಡೆದ ಇಂಗ್ಲಿಷ್ ಚಟುವಟಿಕೆಗಳ ಬಹುಮಾನ ಪ್ರಾಯೋಜಕರಾಗಿ ವಿದ್ಯಾರ್ಥಿಗಳಿಗೆ ಸುಮಾರು 3000 ಮೌಲ್ಯದ ಬಹುಮಾನಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಎಸ್ .ಡಿ .ಎಂ .ಸಿ ಅಧ್ಯಕ್ಷರಾದ ವಿಜಯ ಆಚಾರ್ಯ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಶೃತಿ , ಸಹ ಶಿಕ್ಷಕರು, ಅಡುಗೆ ಸಿಬ್ಬಂದಿಗಳು, ಪೋಷಕರು ಉಪಸ್ಥಿತರಿದ್ದರು.










